ದಾವಣಗೆರೆ: ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾಗಿ ಚಿಕಿತ್ಸೆ ಪಡೆಯಲು ಬಾರದವರು ದೇಶದ್ರೋಹಿಗಳು. ಅವರನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆಯದ ತಬ್ಲಿಘಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ನಿರ್ಬಂಧವನ್ನು ಉಲ್ಲಂಘನೆ ಮಾಡಿ ದೆಹಲಿಯಲ್ಲಿ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆ ಮಾಡಲಾಗಿತ್ತು. ಸಾವಿರಾರೂ ಸಂಖ್ಯೆಯ ಮುಸ್ಲಿಮರು ಇದರಲ್ಲಿ ಭಾಗಿಯಾಗಿದ್ದರು. ಇಲ್ಲಿಂದ ಬೇರೆ ಬೇರೆ ಭಾಗಗಳಿಂದ ತೆರಳಿದ ತಬ್ಲಿಘಿಗಳಿಂದ ಭಾರತದಲ್ಲಿ ಇನ್ನಷ್ಟು ವೈರಸ್ ಜಾಸ್ತಿಯಾಯ್ತು. ಕರ್ನಾಟಕದಲ್ಲಿಯೂ ಪಾಸಿಟಿವ್ ಪ್ರಕರಣಗಳು ಹೆಚ್ಚಾಯ್ತು.
ವೈರಸ್ ತಡೆಯಲು ಸರ್ಕಾರ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾದವರ ಮೇಲೆ ತೀವ್ರ ನಿಗಾ ಇಟ್ಟಿದೆ. ಆದರೆ, ಕೆಲವರು ಚಿಕಿತ್ಸೆಗೆ ಬಾರದೆ ಗುಟ್ಟಾಗಿ ಇದ್ದಾರೆ. ಚಿಕಿತ್ಸೆ ಬಾರದೆ ಇರುವ ತಬ್ಲಿಘಿಗಳನ್ನು ದೇಶದ್ರೋಹಗಳು ಎಂದಿರುವ ರೇಣುಕಾಚಾರ್ಯ, ವೈರಸ್ ಹರಿಸುವುದು ದೇಶಾದ್ರೋಹದ ಕೆಲಸ ಎಂದು ಹೇಳಿಕೆ ನೀಡಿದ್ದಾರೆ.








