2021ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜಾಕೊವಿಕ್
ವಿಶ್ವದ ನಂಬರ್ ವನ್ ಆಟಗಾರ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಪ್ರತಿಷ್ಠಿತ 2021ರ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಫೈನಲ್ ನಲ್ಲಿ ನೊವಾಕ್ ಜಾಕೊವಿಕ್ ಅವರು ಗ್ರೀಸ್ ನ ಸ್ಟೆಫಾನೊಸ್ ಸಿಟ್ಸಿಪಸ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು.
ರೋಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಜಾಕೊವಿಕ್ ಅವರು 6-7, 2-6, 6-3, 6-2, 6-4ರಿಂದ ಸ್ಟೆಫಾನೊಸ್ ಅವರನ್ನು ಸೋಲಿಸಿದ್ರು.
ಈ ಮೂಲಕ ನೊವಾಕ್ ಜಾಕೊವಿಕ್ ಅವರು ತನ್ನ ಟೆನಿಸ್ ಬದುಕಿನಲ್ಲಿ ಎರಡನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವಲ್ಲಿ ಸಫಲರಾದ್ರು. ಈ ಹಿಂದೆ 2016ರಲ್ಲಿ ಜಾಕೊವಿಕ್ ಅವರು ಮೊದಲ ಫ್ರೆಂಚ್ ಓಪನ್ ಗೆದ್ದಿದ್ದರು.
ಅಷ್ಟೇ ಅಲ್ಲ, ನೊವಾಕ್ ಜಾಕೊವಿಕ್ ಅವರು ತನ್ನ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆಯನ್ನು 19ಕ್ಕೇರಿಸಿಕೊಂಡ್ರು. ಈಗಾಗಲೇ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರು ದಾಖಲೆಯ ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಈ ಬಾರಿಯ ಫೆಂಚ್ ಓಪನ್ ಟೂರ್ನಿಯಲ್ಲಿ Pಜಾಕೊವಿಕ್ ಅವರು ಸೆಮಿಫೈನಲ್ ನಲ್ಲಿ ರಫೆಲ್ ನಡಾಲ್ ಅವರನ್ನು ಸೋಲಿಸಿದ್ದರು.
ಫೈನಲ್ ನಲ್ಲಿ ಮೊದಲ ಎರಡು ಸೆಟ್ ಗಳನ್ನು ಸೋತ್ರೂ ಎದೆಗುಂದದ ಜಾಕೊವಿಕ್ ಅವರು ನಂತರದ ಮೂರು ಸೆಟ್ ಗಳನ್ನು ಗೆದ್ದು ಸ್ಟೆಫಾನೊಸ್ ಅವರನನ್ನು ಚಕಿತಗೊಳಿಸಿದ್ರು.