2020ರ ಯುಎಸ್ ಓಪನ್ ಟೂರ್ನಿಯಲ್ಲಿ ಆಡಲಿರುವ ನೊವಾಕ್ ಜಾಕೊವಿಕ್
2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜಾಕೊವಿಕ್ ಆಡಲಿದ್ದಾರೆ. ಆಗಸ್ಟ್ 31ರಿಂದ ಆರಂಭವಾಗಲಿರುವ ಯುಎಸ್ ಓಪನ್ ಟೂರ್ನಿಯಲ್ಲಿ ಈ ಹಿಂದೆ ಪ್ರಮುಖ ಆಟಗಾರರು ಭಾಗವಹಿಸುತ್ತಿಲ್ಲ ಎಂದು ಹೇಳಲಾಗಿತ್ತು.
ಈಗಾಗಲೇ ರಫೆಲ್ ನಡಾಲ್ ಆಡಲ್ಲ ಎಂದು ಹೇಳಿದ್ದಾರೆ. ಹಾಗೇ ರೋಜರ್ ಫೆಡರರ್ ಅವರು ಗಾಯದ ಸಮಸ್ಯೆಯಿಂದ 2020ರ ಯಾವುದೇ ಟೂರ್ನಿಯಲ್ಲಿ ಭಾಗವಹಿಸಲ್ಲ ಎಂದು ತಿಳಿಸಿದ್ದಾರೆ. ಇದೀಗ ಜಾಕೋವಿಕಡ್ ಯುಎಸ್ ಓಪನ್ ಟೂರ್ನಿ ಆಡುತ್ತಿರುವ ಪ್ರಮುಖ ಆಟಗಾರನಾಗಿದ್ದಾರೆ. ಇವರ ಜೊತೆ ಮಾಜಿ ಚಾಂಪಿಯನ್ ಇಂಗ್ಲೆಂಡ್‍ನ ಆಂಡಿ ಮುರ್ರೆ ಅವರು ಸ್ಪರ್ಧಿಸಲಿದ್ದಾರೆ.
ಜೈವಿಕ ಸುರಕ್ಷತೆಯೊಂದಿಗೆ ಈ ಬಾರಿಯ ಯುಎಸ್ ಓಪನ್ ಟೂರ್ನಿ ನಡೆಯಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ. ಆದ್ರೆ ಪಂದ್ಯ ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ.
ನಾನು ಯುಎಸ್ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದೇನೆ. ಈ ವಿಷಯವನ್ನು ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ. ಟೂರ್ನಿಯನ್ನು ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅದೇ ರೀತಿ ವೆಸ್ಟರ್ನ್ ಆಂಡ್ ಸೌತರ್ನ್ ಓಪನ್ ಟೂರ್ನಿಯಲ್ಲೂ ಭಾಗಿಯಾಗುತ್ತಿರುವುದಾಗಿ ನೊವಾಕ್ ಜಾಕೊವಿಕ್ ತಿಳಿಸಿದ್ದಾರೆ.
17 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಿರುವ ಜಾಕೊವಿಕ್ ಅವರು ಆಗಸ್ಟ್ 15ರಂದು ನ್ಯೂಯಾರ್ಕ್‍ಗೆ ಆಗಮಿಸಿದ್ದಾರೆ. ಟೂರ್ನಿಯಲ್ಲಿ ಆಡುವ ನಿರ್ಧಾರ ತೆಗೆದುಕೊಳ್ಳಲು ತುಂಬಾನೇ ಕಠಿಣವಾಗಿತ್ತು. ಕೋವಿಡ್ -19 ಆತಂಕವೂ ಇತ್ತು. ಆದ್ರೂ ಟೂರ್ನಿಯಲ್ಲಿ ಆಡಲು ಉತ್ಸುಕನಾಗಿದ್ದೇನೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ನಾನು ಸಿದ್ಧನಾಗಿದ್ದೇನೆ. ಈಗಾಗಲೇ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದೇನೆ. ಅಂಗಣಕ್ಕೆ ಮತ್ತೆ ಮರಳುತ್ತಿರುವುದು ತುಂಬಾ ಖುಷಿಯಾಗುತ್ತಿದೆ ಅಂತಾರೆ ನೊವಾಕ್ ಜೊಕೊವಿಕ್.
ಆಗಸ್ಟ್ 22ರಿಂದ ಫ್ಲಶಿಂಗ್ ಮಿಡೋಸ್ ನಲ್ಲಿ ವೆಸ್ಟರ್ನ್ ಮತ್ತು ಸೌತರ್ನ್ ಓಪನ್ ಟೂರ್ನಿ ನಡೆಯಲಿದೆ. ಆನಂತರ ಆಗಸ್ಟ್ 31ರಿಂದ ಯುಎಸ್ ಓಪನ್ ಟೂರ್ನಿ ಶುರುವಾಗಲಿದೆ.