ದೇಶದಾದ್ಯಂತ ಎನ್.ಪಿ.ಆರ್ ಹಾಗೂ ಸಿಎಎ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯತ್ತಿರುವಾಗಲೇ ಏಪ್ರಿಲ್ ೧ ರಂದು ಕಾಯ್ದೆ ಜಾರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಈ ಕಾಯ್ದೆಗೆ ಮೊದಲು ಒಳಪಡುವ ಪ್ರಜೆಗಳೇ ರಾಷ್ಟ್ರಪತಿ, ಪ್ರಧಾನಿ ಮತ್ತು ಉಪ ರಾಷ್ಟ್ರಪತಿಗಳು ಎನ್ನಲಾಗಿದೆ. ಕಾಯ್ದೆ ಜಾರಿಯ ಮೊದಲ ದಿನವೇ ಇವರನ್ನು ಪಟ್ಟಿಗೆ ಸೇರ್ಪಡೆಗೊಳಿಸಿಕೊಳ್ಳುವುದರಿಂದ ಎನ್‌ಪಿಆರ್ ಗೆ ಮಹತ್ವದ ಪ್ರಚಾರ ಸಿಕ್ಕಂತೆ ಆಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ವಿವರಗಳನ್ನು ನೋಡುವುದಾದರೆ-
– ಏಪ್ರಿಲ್ 1ರಿಂದ ಎನ್‌ಪಿಆರ್ ಪಟ್ಟಿಗೆ ಸೇರ್ಪಡೆ ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ.
– ಪಟ್ಟಿಯ ಮೊದಲ ಸದಸ್ಯರಾಗಿ ಸೇರ್ಪಡೆಗೊಳ್ಳಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್
– ಪ್ರಧಾನಿ ಮೋದಿ, ರಾಮನಾಥ ಕೋವಿಂದ್, ವೆಂಕಯ್ಯನಾಯ್ಡು ಸೇರ್ಪಡೆಯಿಂದ ಎನ್‌ಪಿಆರ್‌ಗೆ ಬೂಸ್ಟ್ ಸಿಕ್ಕಂತಾಗಲಿದೆ.