ಜೇಮ್ಸ್ ಪ್ರೀ ರಿಲೀಸ್ ಇವೆಂಟ್ ಗೆ ಬರ್ತಾರ ಎನ್ ಟಿ ಆರ್, ಜಿರಂಜೀವಿ…?
ಪುನೀತ್ ರಾಜ್ ಕುಮಾರ ಅಭಿನಯದ ಕೊನೆಯ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಅಪ್ಪು ಹುಟ್ಟು ಹಬ್ಬದಂದು ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ. ಚಿತ್ರದ ಪ್ರಚಾರಾರ್ಥವಾಗಿ ಸಿನಿಮಾ ಹಲವು ಸ್ಟಿಲ್ ಗಳನ್ನ ಸಿನಿಮಾ ತಂಡ ಬಿಡುಗಡೆ ಮಾಡಿದೆ.
ಪುನೀತ್ ವಿಭಿನ್ನ ಗೆಟಪ್ ಗಳಲ್ಲಿರುವ ಪೋಟೋಗಳನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಪುನೀತ್ ರಾಜ್ ಕುಮಾರ್ ಕೊನೆ ಸಿನಿಮಾ ಎನ್ನುವ ಕಾರಣಕ್ಕೆ ಭರ್ಜರಿಯಾಗಿ ರಿಲೀಸ್ ಮಾಡಲು ಮತ್ತು ಸಂಭ್ರಮಿಸಲು ಅಭಿಮಾನಿಗಳು ರೆಡಿಯಾಗಿದ್ದಾರೆ.
Stills from the archives of #James that'll make you raise your eyebrows and look at awe at the mighty POWER that's all set to rule the 'Cinema Kingdom' from March 17th.🔥#BoloBoloJames @PuneethRajkumar@BahaddurChethan #KishorePathikonda pic.twitter.com/ghtSZwuU4P
— James (@JamesTheMovie1) February 25, 2022
ಜೇಮ್ಸ್ ಚಿತ್ರದ ರಿಲೀಸ್ ಗು ಮನ್ನವೇ ಅದ್ದೂರಿ ಈವೆಂಟ್ ನಡೆಸಲು ಸಿನಿಮಾ ತಂಡ ಮುಂದಾಗಿದೆ. ಪ್ರೀ ರಿಲೀಸ್ ಇವೆಂಟ್ ನ್ನ ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್ ಟಿ ಆರ್ ಮತ್ತು ಜಿರಂಜೀವಿ ಅತಿಥಿಗಳಾಗಿ ಆಗಮಿಸುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಅಪ್ಪು ಕೊನೆಯ ಚಿತ್ರವಾಗಿರುವ ಕಾರಣ ಕಾರ್ಯಕ್ರಮವನ್ನ ಸ್ಮರಣೀಯವಾಗಿಲು ಎಲ್ಲಾ ರೀತಿಯಲ್ಲೂ ಸಿದ್ದತೆ ಮಾಡಲಾಗುತ್ತಿದೆ. ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಮಾರ್ಚ್ 6 ರಂದು ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಮತ್ತು ಜೂನಿಯರ್ ಎನ್ ಟಿ ಆರ್ ಪ್ರಮುಖ ಅತಿಥಿಗಳಾಗಿ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಸೋಶಿಯ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಜೇಮ್ಸ್ 5 ಭಾಷೆಗೆ ಡಬ್ ಆಗಿ ತೆರೆಗೆ ಬರಲಿದೆ. ಕನ್ನಡದ ಜೊತೆಗೆ ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಗೆ ರಿಲೀಸ್ ಆಗಲಿದೆ. ಈ ಹಿಂದೆ ಪುನೀತ್ ಅಭಿನಯದ ಯುವರತ್ನ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು.
ಅಭಿಮಾನಿಗಳು ಕೂಡ ಜೇಮ್ಸ್ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಹೆಲಿಕಾಪ್ಟರ್ ಮೂಲಕ ವಿರೇಶ್ ಚಿತ್ರಮಂದಿರ ಹಾಗೂ ಅಪ್ಪು ಸಮಾಧಿ ಮೇಲೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಥಿಯೇಟರ್ ಮುಂದೆ ಅಪ್ಪು ಅಭಿನಯದ 30 ಸಿನಿಮಾಗಳ ಕಟ್ಔಟ್ ಸೇರಿದಂತೆ ರಾಜ್ಯಾದ್ಯಂತ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ‘ಜೇಮ್ಸ್’ ಬಿಡುಗಡೆ ದಿನ ಅಭಿಮಾನಿಗಳ ಸಂಭ್ರಮ ಜೋರಾಗಿರುತ್ತೆ ಅನ್ನುವುದು ಮಾತ್ರ ಕನ್ಫರ್ಮ್.