ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನ ರಣಕೇಕೆ ಹಾಕುತ್ತಿದೆ. ಜಿಲ್ಲೆಯಲ್ಲಿ ಈಗಾಗ್ಲೆ ಕೊರೊನ ಸೋಂಕಿತರ ಸಂಖ್ಯೆ 48ಕ್ಕೇರಿದೆ. ಆದ್ರೆ ಈ 48 ಪ್ರಕರಣಗಳಲ್ಲಿ ಮೂವರ ಪಾಸಿಟಿವ್ ಪ್ರಕರಣ ಜಿಲ್ಲಾಡಳಿತಕ್ಕೆ ಸವಾಲಾಗಿವೆ. ಇವತ್ತಿಗೂ ಮೂರು ಪ್ರಕರಣಗಳ ಕೊರೊನಾ ಮೂಲ ಸಿಗದೇ ತಲೆನೋವಾದಂತಾಗಿದೆ. ಬಾಗಲಕೋಟೆ ಜಿಲ್ಲೆಯ ಮೊದಲ ಪೇಷಂಟ್ ನಂ: 125 ಮೂಲ ಸಹ ಇಂದಿಗೂ ನಿಗೂಢವಾಗಿದೆ.125 ಅಂದ್ರೆ ಜಿಲ್ಲೆಯ ಮೊದಲ ಪೇಷಂಟ್ 75 ವರ್ಷದ ವೃದ್ದ ಎಪ್ರಿಲ್ 3 ರಂದು ಕೊರೊನಾದಿಂದ ಮೃತನಾಗಿದ್ರು. ಆತನಿಂದ ಹಳೆ ಬಾಗಲಕೋಟೆಯಲ್ಲಿ ಇವರೆಗೂ 15 ಜನರಿಗೆ ಸೊಂಕು ತಗುಲಿದೆ. ಆ ವೃದ್ಧನಿಗೆ ಕಲಬುರ್ಗಿ ಮೂಲದಿಂದ ಬಂದಿದೆ ಅಂದರೂ ಇಂದಿಗು ದೃಢಪಟ್ಟಿಲ್ಲ. ಇನ್ನು ಪೇಷಂಟ್ ನಂ:381 ರ ಕೊರೊನಾ ಮೂಲ ಕೂಡ ಪತ್ತೆ ಆಗಿಲ್ಲ. ಪೇಷಂಟ್ ನಂಬರ್ 381 ಜಮಖಂಡಿ ನಿವಾಸಿ ಆಗಿದ್ದಾರೆ. ಈ 381 ರಿಂದ ಇಲ್ಲಿವರೆಗೂ ಜಮಖಂಡಿಯಲ್ಲಿ ಐದು ಜನರಿಗೆ ಕೊರೋನಾ ಸೋಂಕು ಬಂದಿದೆ. ಇನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮೊದಲ ಪ್ರಕರಣ ಅನ್ನಿಸಿರೊ ಪೇಷಂಟ್ ನಂಬರ್ 607 ಗರ್ಭಿಣಿಗೆ ಕೊರೊನಾ ಮೂಲ ಆಗಿಲ್ಲ ಪತ್ತೆ.ಗರ್ಭಿಣಿಯಿಂದ ಒಟ್ಟು 12 ಜನರಿಗೆ ಈಗಾಗ್ಲೆ ಸೊಂಕು ತಗುಲಿದೆ. ಸೋಂಕಿತ ಗೃಭಿಣಿಯ ಗ್ರಾಮ
ಡಾಣಕಶಿರೂರನಲ್ಲೇ 12 ಪ್ರಕರಣ ಕಂಡುಬAದಿದೆ. ಗರ್ಭಿಣಿ ಟ್ರಾವೆಲ್ಲಿಂಗ್ ಹಿಸ್ಟರಿ ಬಗ್ಗೆ ಬಾಗಲಕೋಟೆ, ಗದಗ, ಧಾರವಾಡಜಿಲ್ಲಾಡಳಿತಕ್ಕೆ ಸವಾಲಾಗಿದೆ. ಗರ್ಭಿಣಿ ಮೊದಲು ಗದಗ ಜಿಲ್ಲೆ ರೋಣ ಖಾಸಗಿ ಆಸ್ಪತ್ರೆ, ನಂತರ ಧಾರವಾಡದ ಎಸ್ ಡಿ ಎಮ್,ಸದ್ಯ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದಾಳೆ. ಹೀಗಾಗಿ ಜಿಲ್ಲೆಯ ಈ ಮೂರು ಪ್ರಕರಣ ಜಿಲ್ಲಾಡಳಿತಕ್ಕೆ ತಲೆ ನೋವಾದಂತಾಗಿದೆ.
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...








