ನವದೆಹಲಿ : ಭಾರತದಲ್ಲಿ ಕೊರೊನಾಸುರನ ಆರ್ಭಟ ಮುಂದುವರಿದಿದೆ. ಸತತ ಮೂರನೇ ದಿನವೂ ಕೂಡ ಭಾರತದ ವಿವಿಧ ರಾಜ್ಯಗಳಲ್ಲಿ 3,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದೆ. ಭಾರತದ ಸೋಂಕಿತರ ಸಂಖ್ಯೆ ಇಂದು 60,000 ಕ್ಕೆ ತಲುಪಲಿದೆ ಎನ್ನುವ ಅಘಾತಕಾರಿ ಮಾಹಿತಿ ಹೊರಬದಿದ್ದೆ. ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 59,662 ಕ್ಕೆ ಏರಿದೆ. ಇದುವರೆಗೂ ಕೊರೊನಾಸುರನಿಗೆ 1,981 ಮಂದಿ ಬಲಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 95 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, ಕಳೆದ 24 ಗಂಟೆಗಳಲ್ಲಿ ಈ ರಾಜ್ಯದಲ್ಲಿ ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ.
ಇನ್ನು ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 39,834ಗಳಿದ್ದು, ಒಟ್ಟು ಕೊರೊನಾ ವೈರಸ್ ಪ್ರಕರಣಗಳಲ್ಲಿ ಸುಮಾರು 30% ರಷ್ಟು ರೋಗದಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ರಾಜ್ಯವಾರು ಸ್ಥಿತಿ ಇಲ್ಲಿದೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – 33
ಆಂಧ್ರಪ್ರದೇಶ – 1,887
ಅಸ್ಸಾಂ – 59
ಬಿಹಾರ – 571
ಚಂಡೀಗಢ – – 150
ಛತ್ತೀಸ್‌ಗಢ – 59
ದಾದರ್ ನಗರ ಹವೇಲಿ – 1
ದೆಹಲಿ – 6,318
ಗುಜರಾತ್ – 7,402
ಹರಿಯಾಣ – 647
ಹಿಮಾಚಲ ಪ್ರದೇಶ – 50
ಜಮ್ಮು ಮತ್ತು ಕಾಶ್ಮೀರ – 823
ಜಾರ್ಖಂಡ್ – 132
ಕರ್ನಾಟಕ – 753
ಕೇರಳ – 503
ಲಡಾಖ್ – 42
ಮಧ್ಯಪ್ರದೇಶ – 3,341
ಮಹಾರಾಷ್ಟ್ರ – 19,063
ಮೇಘಾಲಯ – 12
ಮಿಜೋರಾಂ – 1
ಒಡಿಶಾ – 271
ಪುದುಚೇರಿ – 9
ಪಂಜಾಬ್ – 1,732
ರಾಜಸ್ಥಾನ – 3,579
ತಮಿಳುನಾಡು – 6,009
ತೆಲಂಗಾಣ – 1,133
ತ್ರಿಪುರ – 113
ಉತ್ತರಾಖಂಡ – 63
ಉತ್ತರ ಪ್ರದೇಶ – 3,214
ಪಶ್ಚಿಮ ಬಂಗಾಳ – 1,678








