ಬೀದರ್: ರಾಜ್ಯದ ಕೊನೆಯ ಗಡಿ ಜಿಲ್ಲೆ ಬೀದರ್ನ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನ ಕೊರೊನಾ ರೋಗಿಯ ಸಂಬಂಧಿಕರಿಂದ ನರ್ಸ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಕೊರೊನಾ ಸೋಂಕಿತ ರೋಗಿಗಳ ಸಂಬಂಧಿಕರು ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಬಿಡುತ್ತಿಲ್ಲ. ಕೊರೊನಾ ರೋಗಿಗಳು ಚೆನ್ನಾಗಿದ್ದರೂ ನಮ್ಮನ್ನೇಕೆ ಅವರೊಡನೆ ಮಾತನಾಡಲು ಬಿಡುತ್ತಿಲ್ಲ ಎಂದು ನರ್ಸ್ವೊಬ್ಬರ ಮೇಲೆ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪದೇ ಪದೇ ಪಾಸಿಟಿವ್ ರೋಗಿಗಳ ಸಂಬಂಧಿಕರ ಇಂತಹ ಕಿರುಕುಳದಿಂದ ನಡೆಯುತ್ತಿದೆ ಎಂದು ಆರೋಪಿಸಿದ ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿ, ಕರ್ತವ್ಯಕ್ಕೆ ಗೈರಾಗಿ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಹಲ್ಲೆ ಖಂಡಿಸಿ ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆಯ ಬಿಸಿಗೆ ತೀವ್ರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ಭಾಲ್ಕಿ ತಾಲೂಕಿನ ರೋಗಿಯೊಬ್ಬ ಆಂಬ್ಯುಲೆನ್ಸ್ನಲ್ಲೇ ಗಂಟೆಗೂ ಹೆಚ್ಚು ಕಾಲ ನರಳಬೇಕಾಯಿತು. ಹಲ್ಲೆ ಆರೋಪಿಯನ್ನು ಪೆÇಲೀಸರು ವಶಕ್ಕೆ ಪಡೆದ ನಂತರ ಪ್ರತಿಭಟನಾಕಾರರು ತಣ್ಣಗಾದರು. ನಂತರ ರೋಗಿಯನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಯಿತು.