NZ vs SL 2nd Test : ಮೊದಲ ದಿನದಾಟಕ್ಕೆ ಮಳೆ ಅಡ್ಡಿ: ಕಿವೀಸ್‌ಗೆ ಆಸರೆಯಾದ ಡೆವೊನ್ ಕಾನ್ವೆ
ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ(78) ಜವಾಬ್ದಾರಿಯುತ ಆಟದ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅತಿಥೇಯ ನ್ಯೂಜಿ಼ಲೆಂಡ್ ಮೊದಲ ದಿನದ ಗೌರವ ಪಡೆದುಕೊಂಡಿತು.
ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ದಿನದ ಬಹುತೇಕ ಆಟಕ್ಕೆ ಮಳೆ ಅಡ್ಡಿಯಾಯಿತು. ಪರಿಣಾಮ ಮೊದಲ ದಿನದಾಟದ 32 ಓವರ್‌ಗಳ ಆಟ ಮಳೆಯಿಂದ ಸ್ಥಗಿತಗೊಂಡಿತು.
ಬಳಿಕ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಜಿ಼ಲೆಂಡ್, 48 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 155 ರನ್‌ಗಳಿಸಿದೆ. ಕಿವೀಸ್ ಪರ ಕೇನ್ ವಿಲಿಯಂಸನ್(26*) ಹಾಗೂ ಹೆನ್ರಿ ನಿಕೋಲ್ಸ್(18*) ಅಜೇಯರಾಗಿದ್ದಾರೆ.
ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲಾಥಂ(21) ಹಾಗೂ ಡೆವೊನ್ ಕಾನ್ವೆ(78) ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 87 ರನ್ ಗಳ ಅತ್ಯುತ್ತಮ ಆರಂಭ ನೀಡಿದರು.
ಲಂಕಾ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಲಾಥಂ, ಆಕರ್ಷಕ ಅರ್ಧಶತಕ ಬಾರಿಸಿದರು. ನಂತರ ಬಂದ ಕಿವೀಸ್ ಪರ ಕೇನ್ ವಿಲಿಯಂಸನ್(26*) ಹಾಗೂ ಹೆನ್ರಿ ನಿಕೋಲ್ಸ್(18*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ ಪರ ಕಸುನ್ ರಜಿತ ಹಾಗೂ ಧನಂಜಯ ಡಿಸಿಲ್ವಾ ತಲಾ 1 ವಿಕೆಟ್ ಪಡೆದರು. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿ಼ಲೆಂಡ್ ಈಗಾಗಲೇ 1-0 ಮುನ್ನಡೆ ಸಾಧಿಸಿದ್ದು, ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇನ್ ವಿಲಿಯಂಸನ್ ಅವರ ಅದ್ಭುತ ಶತಕದಿಂದ ಕಿವೀಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಪಡೆಯಿತು.
NZ vs SL 2nd Test : Rain interrupts first day’s play : Devon Conway supports Kiwis