Nzw-vs-Indw | ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು
ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡದ ಗೆಲುವಿನ ಪಾರುಪತ್ಯ ಮುಂದುವರೆದಿದೆ.
2022ರ ಮಹಿಳಾ ಏಕದಿನ ವಿಶ್ವಕಪ್ ಭಾಗವಾಗಿ ಹ್ಯಾಮಿಲ್ಟನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ, ಟೀಂ ಇಂಡಿಯಾ ವಿರುದ್ಧ 62 ಗಳಿಂದ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮಹಿಳಾ ತಂಡ ನಿಗದಿತ 50ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿತ್ತು.
ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ 50 ರನ್, ಸ್ಯಾಟರ್ಥ್‌ವೈಟ್ 75 ರನ್, ಕೇಟಿ ಮಾರ್ಟಿನ್ 41 ರನ್ ಗಳಿಸಿದ್ದರು
ಭಾರತ ಮಹಿಳಾ ತಂಡದ ಪರ ಪೂಜಾ ವಸ್ತ್ರಕರ್ 34 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದಾರೆ.
ಗಾಯಕ್ವಾಡ್ 46 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಗೋಸ್ವಾಮಿ, ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದಿದ್ದಾರೆ.
ಈ ಗುರಿಯನ್ನ ಬೆನ್ನತ್ತಿದ ಭಾರತ ಮಹಿಳಾ ಕ್ರಿಕೆಟ್ ತಂಡ, ಆರಂಭದಿಂದಲೂ ವಿಕೆಟ್ ಗಳನ್ನ ಕಳೆದುಕೊಳ್ಳುತ್ತಾ ಸಾಗಿತು.
ಭಾರತದ ಪರ ಹರ್ಮನ್ ಪ್ರಿತ್ ಕೌರ್ 63 ಎಸೆತಗಳಲ್ಲಿ 71 ರನ್ ಗಳಿಸಿದರು. ಇದರಲ್ಲಿ 2 ಸಿಕ್ಸರ್, 6 ಬೌಂಡರಿಗಳಿವೆ.
ನಾಯಕಿ ಮಿಥಾಲಿ ರಾಜ್ 31 ರನ್ ಗಳಿಸಿದರು. ಇವರನ್ನ ಬಿಟ್ಟರೇ ಬೇರೆ ಯಾವ ಆಟಗಾರ್ತಿ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಅಂತಿಮವಾಗಿ 46.4 ಓವರ್ ಗಳಲ್ಲಿ ಟೀಂ ಇಂಡಿಯಾ 198 ರನ್ ಗಳಿಗೆ ತನ್ನಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.nzw-vs-indw-New Zealand Women won by 62 runs
nzw-vs-indw-New Zealand Women won by 62 runs









