ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ನಿವಾಸದ ಗೋಡೆಯ ಮೇಲೆ ಅಶ್ಲೀಲ ಪೋಸ್ಟರ್ ನ್ನು ಕಿಡಿಗೇಡಿಗಳು ಅಂಟಿಸಿದ್ದಾರೆ.
ನಗರದ ಸದಾಶಿವನಗರದಲ್ಲಿನ ರಮೇಶ್ ಜಾರಕಿಹೊಳಿ (Ramesh Jarakiholi) ನಿವಾಸದ ಮೇಲೆಯೇ ಅವಾಚ್ಯ ಶಬ್ದಗಳ ಪೋಸ್ಟರ್ ಅಂಟಿಸಲಾಗಿದೆ. ಪೋಸ್ಟರ್ ನಲ್ಲಿ ಏಕವಚನದಲ್ಲಿ ನಿಂದಿಸಲಾಗಿದೆ. ಅಲ್ಲದೇ, ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ. ಇದೇ ನಿನ್ನ ಸಂಸ್ಕೃತಿ ಎಂದು ಪದ ಬಳಸಿದ್ದಾರೆ. ಪೊಲೀಸರು ಪೋಸ್ಟರ್ ತೆರವು ಮಾಡಿದ್ದಾರೆ.
ಸೋಮವಾರವಷ್ಟೇ ಡಿಸಿಎಂ ಡಿಕೆಶಿ (DK Shivakumar) ವಿರುದ್ಧ ರಮೇಶ್ ಜಾರಕಿಜೊಳಿ ಗುಡುಗಿದ್ದರು. ಡಿಕೆ ಹೆದರು ಪುಕ್ಕಲ, ಮೋಸಗಾರ ಎಂದು ಆರೋಪಿಸಿದ್ದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ (Congress) ಕಾರ್ಯಕರ್ತರು, ಡಿಕೆ ಬೆಂಬಲಿಗರು ಪೋಸ್ಟರ್ ಅಂಟಿಸಿರಬಹುದಾ? ಎಂಬ ಶಂಕೆ ಸದ್ಯ ವ್ಯಕ್ತವಾಗುತ್ತಿದೆ.








