ಫೋರ್ಬ್ಸ್ ಪಟ್ಟಿಯಲ್ಲಿ ಒಡಿಶಾದ ಆಶಾ ಕಾರ್ಯಕರ್ತೆಗೆ ಸ್ಥಾನ
ಭುವನೇಶ್ವರ : ವಿಶ್ವದ ಪ್ರತಿಷ್ಠಿತ ಫೋಬ್ರ್ಸ್ನ ಪ್ರಭಾವಶಾಲಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಒಡಿಶಾ ಮೂಲದ ಆಶಾ ಕಾರ್ಯಕತೆಯೊಬ್ಬರು ಸ್ಥಾನ ಪಡೆದಿದ್ದಾರೆ.
45 ವರ್ಷದ ಆಶಾ ಕಾರ್ಯಕರ್ತೆ ಮತಿಲ್ದಾ ಕುಲ್ಲು ಎಂಬುವವರು ಫೋರ್ಬ್ಸ್ನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.
ಮತಿಲ್ದಾ ಕುಲ್ಲು ಅವರು ತಿಂಗಳಿಗೆ ಕೇವಲ 4,500 ರೂ ಸಂಬಳ ಪಡೆಯುವ ಒಡಿಶಾ ಮೂಲದ ಆದಿವಾಸಿ ಸಮುದಾಯದ ಆಶಾ ಕಾರ್ಯಕರ್ತೆಯಾಗಿದ್ದಾರೆ.
ಒಡಿಶಾದ ಸುಂದರ್ಗರ್ ಜಿಲ್ಲೆಯ ಗರ್ಗಡ್ಬಹಲ್ ಗ್ರಾಮದವರಾಗಿರುವ ಮುತಿಲ್ದಾ ಕುಲ್ಲು ಅವರು ತೆಹ್ಸಿಲ್ನ 964 ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಕಳೆದ 15 ವರ್ಷಗಳಿಂದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಉತ್ತಮ ಕಾರ್ಯಗಳಿಂದಾಗಿ ಫೋರ್ಬ್ಸ್ನ 2021ರ ಭಾರತದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಮತಿಲ್ದಾ ಅವರು ಮಾತ್ರವಲ್ಲದೇ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಮಾಜಿ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಸೇರಿ 21 ಮಹಿಳೆಯರು ಸ್ಥಾನ ಪಡೆದಿದ್ದಾರೆ.









