IPhone 13 ಮೇಲೆ 4,000 ರೂ ರಿಯಾಯಿತಿ – ಹೇಗೆ ಪಡೆಯೋದು ನೋಡಿ..
ಐಪೋನ್ ಕೊಂಡುಕೊಳ್ಳಬೇಕು ಎಂಬುದು ಎಲ್ಲಾ ಗ್ಯಾಡ್ಜೆಟ್ ಪ್ರಿಯರ ಆಸೆ. ನೀವು ಸಹ ಐಫೋನ್ 13 ಖರೀದಿಸುವ ಆಲೋಚನೆಯಲ್ಲಿದ್ದರೆ ಇಲ್ಲಿದೆ ಗುಡ್ ನ್ಯೂಸ್. ಐಫೋನ್ 13 ಅಗ್ಗವಾಗಿ ಖರೀದಿಸಲು ಉತ್ತಮ ಅವಕಾಶ ಒದಗಿಬಂದಿದೆ.
iPhone 13, ಮೇಲೆ 4,000 ರೂಪಾಯಿಗಳ ರಿಯಾಯಿತಿ ಸಿಗುತ್ತಿದೆ. ನೀವು ಕ್ರೋಮಾ ಸ್ಟೋರ್‌ನಿಂದ iPhone 13 ನ್ನ ಖರೀದಿಸಿದರೆ ಈ ರಿಯಾಯಿತಿಯನ್ನ ಪಡೆದುಕೊಳ್ಳಬಹುದು. ಐಫೋನ್ 13 ಹೊರತಾಗಿ, ಐಫೋನ್ 12, ಮ್ಯಾಕ್‌ಬುಕ್ ಏರ್ ಮತ್ತು ಇತರ ಉತ್ಪನ್ನಗಳ ಮೇಲೆ ಕ್ರೋಮ್ ಸ್ಟೋರ್ ರಿಯಾಯಿತಿ ನೀಡುತ್ತಿದೆ.
iPhone 13 ನಲ್ಲಿ ರಿಯಾಯಿತಿ ಪಡೆಯುವುದು ಹೇಗೆ ?
ಕ್ರೋಮಾ ಸೈಟ್‌ನಲ್ಲಿ ಐಫೋನ್ 13 ಮೊಬೈಲ್ ಅನ್ನ 71,990 ರೂಗಳ ಬೆಲೆಗೆ ನಿಗದಿಪಡಿಸಲಾಗಿದೆ. ನೀವು HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ iPhone 13 ನ್ನ ಖರೀದಿಸಿದರೆ 4,000 ರೂಗಳ ರಿಯಾಯಿತಿ ತೆಗೆದುಕೊಳ್ಳಬಹುದು. ನಂತರ ಮೊಬೈಲ್ ನ ಬೆಲೆ ಬೆಲೆ 67,990 ರೂ ಆಗುತ್ತದೆ.
Amazon ನಲ್ಲಿ iPhone 13 ಇನ್ನೂ ಕಡಿಮೆಗೆ
ಅಮೆಜಾನ್ ಇಂಡಿಯಾದಲ್ಲಿ ಐಫೋನ್ 13 ಬೆಲೆ 68,900 ರೂ ಇದೆ. ಯಾವುದೇ ಬ್ಯಾಂಕ್ ಆಫರ್ ಇಲ್ಲದೆಯೂ ಅಮೆಜಾನ್ ಐಫೋನ್ ನ್ನ ಕಡಿಮೆ ಬೆಲೆಗೆ ಮಾರುತ್ತಿದೆ. Amazon ನಲ್ಲಿ iPhone 13 ಕೊಂಡರೆ 12,700 ರೂಪಾಯಿಗಳವರೆಗೆ ಎಕ್ಸಚೇಂಜ್ ಆಫರ್ ಸಹ ಇದೆ.








