ಹಕ್ಕಿಜ್ವರದ ಆತಂಕ: ಮಹಾರಾಷ್ಟ್ರದಲ್ಲಿ 2,000 ಪಕ್ಷಿಗಳ ‘ಮಾರಣ ಹೋಮ’ಕ್ಕೆ ಸಿದ್ಧತೆ..!
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರದ ಹಾವಳಿ ಹೆಚ್ಚಾಗಿದೆ. ಇತ್ತ ಪರ್ಭನಿ ಮತ್ತು ಬೀಡ್ ಜಿಲ್ಲೆಗಳ ಎರಡು ಗ್ರಾಮಗಳಲ್ಲಿ ಮೃತಪಟ್ಟ ಕೋಳಿಗಳಿಗೆ ‘ಹಕ್ಕಿ ಜ್ವರ’ ಇದ್ದದ್ದು ಖಚಿತವಾದ ಬಳಿಕ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 2,000ಕ್ಕೂ ಅಧಿಕ ಪಕ್ಷಿಗಳನ್ನು ಕೊಲ್ಲಲು ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ.
ನಿಮಗೆ ಗೊತ್ತಾ…? 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಯಾವುದು..!
ಪರ್ಭನಿ ಜಿಲ್ಲೆಯ ಕುಪ್ತಾ ಗ್ರಾಮ ಮತ್ತು ಬೀಡ್ ಜಿಲ್ಲೆಯ ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿ ಮೃತಪಟ್ಟ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಸದ್ಯ ಈ ಗ್ರಾಮಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಇಲ್ಲಿ ಪಕ್ಷಿಗಳ ಮಾರಣ ಹೋಮ ನಡೆಸಲು ತಯಾರಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕುಪ್ತಾ ಗ್ರಾಮದಲ್ಲಿ ಸುಮಾರು 468 ಪಕ್ಷಿಗಳು , ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿ 1,600 ಪಕ್ಷಿಗಳನ್ನ ಸಾಯಿಸುವ ನಿರ್ಧಾರ ಕೈಗೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel