ಧ್ವನಿವರ್ಧಕದ ತರಗತಿಗಳು – ಜಾರ್ಖಂಡ್ ಶಿಕ್ಷಕರ ಆನ್ಲೈನ್ ಕಲಿಕೆ
ಛತ್ತೀಸ್’ಗಡ, ಜುಲೈ 29: ಛತ್ತೀಸ್’ಗಡದ ಭಟ್ಪಾಲ್ ಗ್ರಾಮದಲ್ಲಿ ಶಿಕ್ಷಕರು ಕಲಿಸಲು ಕೈಗೊಂಡ ಉಪಕ್ರಮವನ್ನು ಸರ್ಕಾರವು ಶ್ಲಾಘಿಸಿದೆ. ಮಕ್ಕಳ ಶಿಕ್ಷಣಕ್ಕಾಗಿ ಲೌಡ್ ಸ್ಪೀಕರ್ ಮಾದರಿಯಲ್ಲಿ ಆಫ್ ಲೈನ್ನಲ್ಲಿ ಅಧ್ಯಯನ ನಡೆಸಲು ಕ್ರಮ ಕೈಗೊಂಡಿರುವುದಾಗಿ ಶಾಲಾ ಶಿಕ್ಷಣ ಸಚಿವ ಡಾ.ಪ್ರೇಮಸಾಯಿ ಸಿಂಗ್ ತೆಕಾಮ್ ಹೇಳಿದ್ದಾರೆ. ಛತ್ತೀಸ್ಗಡದಲ್ಲಿ ಕೊರೋನಾ ಸೋಂಕಿನ ಕಾರಣದಿಂದ, ಈಗ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ತರಗತಿ ನಡೆಸಲಾಗುತ್ತಿಲ್ಲ. ಹಾಗಾಗಿ ಭಟ್ಪಾಲ್ ಗ್ರಾಮದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಆರು ಧ್ವನಿವರ್ಧಕಗಳನ್ನು ಹಾಕಲಾಗಿದೆ. ಇಲ್ಲಿ ದಿನಕ್ಕೆ 2 ಬಾರಿ 90 ನಿಮಿಷಗಳ ಕಾಲ ತರಗತಿಯನ್ನು ಧ್ವನಿವರ್ಧಕಗಳ ಮೂಲಕ ನಡೆಸಲಾಗುತ್ತದೆ. ಸುತ್ತಮುತ್ತಲಿನ ವಿದ್ಯಾರ್ಥಿಗಳು ನಿಗದಿಪಡಿಸಿದ ಜಾಗದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗಿ ಧ್ವನಿವರ್ಧಕದ ಮೂಲಕ ಬೋಧಿಸಲಾಗುವ ಶಿಕ್ಷಣವನ್ನು ಪಡೆಯುತ್ತಾರೆ.
ಇನ್ನು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸ್ಥಳಿಯ ನಿವಾಸಿ ಸುರೇಶ್ ಭಗತ್, ಇದರಿಂದಾಗಿ ಮಕ್ಕಳು ಮಾತ್ರವಲ್ಲ ನಾವು ಕೂಡಾ ಇಂಗ್ಲೀಷ್ನಲ್ಲಿ ಪ್ರಾಣಿ, ಪಕ್ಷಿಗಳಿಗೆ ಏನು ಕರೆಯುತ್ತಾರೆ ಎಂಬುದನ್ನು ಈ ಮೂಲಕ ಕಲಿಯುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಒಂದು ವಾರದೊಳಗೆ ಲಭ್ಯವಿರುವ ಸಂಪನ್ಮೂಲಗಳ ಮೂಲಕ ಎಲ್ಲಾ ಜಿಲ್ಲೆಗಳ ಪ್ರತಿ ಪಂಚಾಯತ್ನಲ್ಲಿ ಕನಿಷ್ಠ ಒಂದು ಶಾಲೆಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಬಸ್ತಾರ್ ಜಿಲ್ಲೆಯಲ್ಲಿ ಲೌಡ್ ಸ್ಪೀಕರ್ಗಳೊಂದಿಗೆ 56 ಪಂಚಾಯಿತಿಗಳಲ್ಲಿ ಅಧ್ಯಯನಗಳು ಪ್ರಾರಂಭವಾಗಿವೆ ಎಂದು ಶಾಲಾ ಶಿಕ್ಷಣ ಸಚಿವ ಡಾ.ಪ್ರೇಮಸಾಯಿ ಸಿಂಗ್ ತೆಕಾಮ್ ಹೇಳಿದ್ದಾರೆ. ಕೋವಿಡ್ -19 ರ ಸಮಯದಲ್ಲಿ ಮಕ್ಕಳ ಶಿಕ್ಷಣವನ್ನು ಮುಂದುವರೆಸಲು ಮಾಡಲಾಗಿರುವ ಈ ಮಾದರಿಗೆ ಇದು ಐಚ್ಛಿಕ ಆನ್’ಲೈನ್ ಶಿಕ್ಷಣ ವ್ಯವಸ್ಥೆ ಎಂದು ಅವರು ಕರೆದರು.
ಜಿಲ್ಲಾ ಖನಿಜ ನಿಧಿ ಅಭಿವೃದ್ಧಿ ಮಂಡಳಿಯ ನಿಖಿಲೇಶ್ ಹರಿ ಎಂಬವರು ಈ ಬಗ್ಗೆ ಮಾಹಿತಿ ನೀಡಿದ್ದು, ಗ್ರಾಮದಲ್ಲಿ 300 ಕುಟುಂಬಗಳಿದ್ದು ಮಕ್ಕಳ ಶಿಕ್ಷಣಕ್ಕಾಗಿ ಆರು ಧ್ವನಿವರ್ಧಕಗಳನ್ನು ಬಳಸಿದ್ದು, ಶಿಕ್ಷಣ ಮಾತ್ರವಲ್ಲದೆ ಅಪೌಷ್ಟಿಕತೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿಯನ್ನು ಕೂಡ ಪ್ರಸಾರ ಮಾಡಲು ಬಳಸಲಾಗುತ್ತದೆ ಎಂದರು.
ಶಿಕ್ಷಕರಲ್ಲಿ ಒಬ್ಬರಾದ ಶೈಲೇಂದ್ರ ತಿವಾರಿ ಅವರು, ಆನ್ ಲೈನ್ ತರಗತಿ ನಡೆಸಲು ಎಲ್ಲಾ ಪೋಷಕರು ಸ್ಮಾರ್ಟ್ ಫೋನ್ ಹೊಂದಿರುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಹಳ್ಳಿಯ ಪ್ರತಿಯೊಂದು ಭಾಗದಿಂದಲೂ ಕೇಳುವ ರೀತಿಯಲ್ಲಿ ಇರಿಸಲಾಗಿದ್ದು, ಇದರಿಂದ ಮಕ್ಕಳು ಮನೆಯಲ್ಲಿ ಕುಳಿತು ಪಾಠವನ್ನು ಕೇಳಬಹುದಾಗಿದೆ ಎಂದು ಹೇಳಿದರು.