ದೇಶದಲ್ಲಿ ಮತ್ತೆ ತೈಲ ಬೆಲೆ ಏರಿಕೆ : ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ ಗೊತ್ತಾ..? India
ಬೆಂಗಳೂರು : ದೇಶದಲ್ಲಿ ಮತ್ತೆ ತೈಲ ಬೆಲೆ ಏರಿಕೆಯಾಗಿದೆ. ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ.
ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 101.39 ರೂ. ಆಗಿದ್ದು, ಡೀಸೆಲ್ ಬೆಲೆ 93.99 ರೂ.ಆಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 98.11 ರೂ. ಆಗಿದ್ದು, ಡೀಸೆಲ್ ಬೆಲೆ 88.65 ರೂ. ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.22 ರೂ. ಆಗಿದ್ದರೆ ಡೀಸೆಲ್ ಬೆಲೆ 96.11 ರೂ. ಆಗಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 99.19 ರೂ. ಡೀಸೆಲ್ ಬೆಲೆ ಲೀಟರ್ ಗೆ 93.23 ರೂ. ಇದೆ.