ಎಲೆಕ್ಟ್ರಿಕ್ ಸ್ಕೂಟಿ ಬೆಲೆ ಹೆಚ್ಚಿಸಲಿದೆ ಓಲಾ ಕಂಪನಿ – ಆಫರ್ ಪಡೆಯಲು ಇಂದೇ ಕೊನೆ ದಿನ
ಮುಂದಿನ ಖರೀದಿ ದಿನಗಳಲ್ಲಿ ಜಾರಿಗೆ ಬರುವಂತೆ S1 ಪ್ರೊ ಸ್ಕೂಟಿಗಳ ಬೆಲೆಯನ್ನ ಹೆಚ್ಚಿಸುವುದಾಗಿ ಓಲಾ ಎಲೆಕ್ಟ್ರಿಕ್ ಗುರುವಾರ ಹೇಳಿದೆ. ಬೆಂಗಳೂರು ಮೂಲದ ಓಲಾ ಸಂಸ್ಥೆಯು ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 17-18 ರಂದು ಮುಂದಿನ ಖರೀದಿ ದಿನವನ್ನ ಪ್ರಾರಂಭಿಸಿದೆ.
“ಈಗಾಗಲೇ S1 Pro ಸ್ಕೂಟಿ ಖರೀದಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು 2 ಅಥವಾ 3 S1 Pro ಸ್ಕೂಟಿ ಖರೀದಿಸಿದವರಿಗೆ ವಿಶೇಷ ಧನ್ಯವಾದಗಳು! 1,29,999 ರೂ ಗೆ ಸ್ಕೂಟಿ ಪಡೆಯಲು ಇದು ಕೊನೆಯ ಅವಕಾಶ. ನಾವು ಮುಂದಿನ ದಿನಗಳಲ್ಲಿ ಸ್ಕೂಟಿ ಬೆಲೆಗಳನ್ನು ಹೆಚ್ಚಿಸುತ್ತೇವೆ. ಈ ವಿಂಡೋ 18 ರ ಮಧ್ಯರಾತ್ರಿ ಕೊನೆಗೊಳ್ಳುತ್ತದೆ! ”ಎಂದು ಓಲಾ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Thanks to all who’ve purchased S1 Pro already and special thanks to those who've bought their 2nd or 3rd S1 Pro!
Last chance to get it for 129,999. We'll be raising prices in the next window. This window ends 18th midnight!😊
Buy now, only on the Ola app! pic.twitter.com/I7FF0GlXQD— Bhavish Aggarwal (@bhash) March 17, 2022
ಹೋಳಿ ಹಬ್ಬದ ಪ್ರಯುಕ್ತ ಗ್ಲೋಸಿ ಫಿನಿಶ್ನಲ್ಲಿ ವಿಶೇಷ ಆವೃತ್ತಿಯ ಕಲರ್ ನಲ್ಲಿ ಸ್ಕೂಟಿ ಬಿಡುಗಡೆಯಾಗುತ್ತಿದೆ. ಮಾರ್ಚ್ 17 ಮತ್ತು 18 ರಂದು ಎರಡು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಸಂಪೂರ್ಣ ಡಿಜಿಟಲ್ ಪಾವತಿ ಪ್ರಕ್ರಿಯೆಯು ಓಲಾ ಅಪ್ಲಿಕೇಶನ್ ಮೂಲಕ ಮಾತ್ರ ಲಭ್ಯವಿದೆ ಎಂದು ಕಂಪನಿ ಹೇಳಿದೆ. Ola ಎಲೆಕ್ಟ್ರಿಕ್ ಪ್ರಸ್ತುತ ಗ್ರಾಹಕರ ಬೇಡಿಕೆಯನ್ನು ಪೂರೈಸಲು Ola S1 ಪ್ರೊ ಸ್ಕೂಟರ್ನ ಉತ್ಪಾದನೆ ಮತ್ತು ವಿತರಣೆಯನ್ನು ಹೆಚ್ಚಿಸುತ್ತಿದೆ.