ಕೊರೊನಾಗೆ ಹೆದರಿ ನಿವೃತ್ತ ಉಪ ತಹಶಿಲ್ದಾರ್ ಆತ್ಮಹತ್ಯೆ
ಚಿಕ್ಕಮಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ಪರಿಣಾಮ ಅತ್ಯಂತ ಭೀಕರವಾಗಿದೆ.. ರಾಜ್ಯದಲ್ಲಿ 2ನೇ ಅಲೆ ತಡೆಗೆ ಲಾಕ್ ಡೌನ್ ವಿಧಿಸಲಾಗಿದೆ.. ಇದ್ರಿಂದಾಗಿ ದಿನಗೂಲಿ ಕಾರ್ಮಿಕರು , ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಸೋಂಕಿತರು ಸಾವಿನ ಸಂಖ್ಯೆಗಳು ಹೆಚ್ಚಾಗ್ತಿದ್ದು, ಈ ಪರಿಸ್ಥಿರಿಯಲ್ಲಿ ಜನರು ಹಾಗೂ ಸೋಂಕಿತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಲ್ಲಿ ಕೋವಿಡ್ ಸೋಂಕಿತರು ಹೆದರಿ ಆತ್ಮಹತ್ಯೆಗೆ ಶರಣಾಗ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಚಿಕ್ಕಮಗಳೂರಿನಲ್ಲಿಯೂ ನಡೆದಿದೆ. ನಿವೃತ್ತ ಉಪ ತಹಶಿಲ್ದಾರ್ ಒಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಲೇನಹಳ್ಳಿಯ ತಾಂಡ್ಯದಲ್ಲಿ ನಡೆದಿದೆ..








