ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ಒಲಂಪಿಕ್ಸ್ ಆಟಗಾರರೇ ವಿಶೇಷ ಅತಿಥಿಗಳು
ನವದೆಹಲಿ : ಸದ್ಯ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರೇ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಯಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಇಡೀ ಭಾರತೀಯ ಒಲಿಂಪಿಕ್ ತಂಡವನ್ನ ವಿಶೇಷ ಆಹ್ವಾನಿತರಾಗಿ ಕೆಂಪು ಕೋಟೆಗೆ ಆಹ್ವಾನಿಸಲಿದ್ದಾರೆ.
ಆ ಸಮಯದಲ್ಲಿ ಪ್ರಧಾನಿಯವರು ಎಲ್ಲರನ್ನು ವೈಯಕ್ತಿಕವಾಗಿ ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ 228 ಸದಸ್ಯರ ತಂಡವು 119 ಆಟಗಾರರನ್ನ ಒಳಗೊಂಡ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದೆ.
ಪ್ರಸ್ತುತ, ಭಾರತವು ಎರಡು ಪದಕಗಳನ್ನ ಹೊಂದಿರುವ ದೇಶಗಳ ಪಟ್ಟಿಯಲ್ಲಿ 63 ನೇ ಸ್ಥಾನದಲ್ಲಿದೆ.
ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್’ನಲ್ಲಿ ಬೆಳ್ಳಿ ಮತ್ತು ಪಿವಿ ಸಿಂಧು ಬ್ಯಾಡ್ಮಿಂಟನ್’ನಲ್ಲಿ ಕಂಚು ಗೆದ್ದಿದ್ದಾರೆ.