ನಟ ಚಿರಂಜೀವಿ (Megastar Chiranjeevi) ಹಾಗೂ ಕುಟುಂಬಸ್ಥರು ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಣೆಗೆ ತೆರಳಿದ್ದಾರೆ. ಸದ್ಯ ಚಿರಂಜೀವಿ ಕುಟುಂಬ ಪಿವಿ ಸಿಂಧು (PV Sindhu) ಜೊತೆ ಮಾತುಕತೆ ನಡೆಸಿದ್ದಾರೆ.
ತೆಲುಗು ನಟ ಚಿರಂಜೀವಿ ಕುಟುಂಬ ಸದ್ಯ ಪ್ಯಾರಿಸ್ ನಲ್ಲಿ (Paris) ವೆಕೇಷನ್ ಮೂಡ್ ನಲ್ಲಿದೆ. ಹೀಗಾಗಿ ಪಿವಿ ಸಿಂಧು ಜೊತೆ ಚಿರಂಜೀವಿ ದಂಪತಿ ಮತ್ತು ರಾಮ್ ಚರಣ್ ದಂಪತಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಸಿಂಧುಗೆ ವಿಶೇಷವಾಗಿ ಚಿರಂಜೀವಿ ಕುಟುಂಬ ಶುಭಕೋರಿದೆ.
ಚಿರಂಜೀವಿ ಕುಟುಂಬದವರು ಇಲ್ಲಿಂದ ಉಪ್ಪಿನಕಾಯಿ, ಪುಳಿಯೋಗರೆ, ಉಪ್ಪಿಟ್ಟು, ರಸಂ ಮಿಕ್ಸ್ಗಳನ್ನು ಪ್ಯಾರಿಸ್ಗೆ ಕೊಂಡೊಯ್ದಿದ್ದಾರೆ. ದಕ್ಷಿಣ ಭಾರತದ ಆಟಗಾರರಿಗೆ ಅವುಗಳನ್ನೆಲ್ಲ ಉಚಿತವಾಗಿ ನೀಡಿದ್ದಾರೆ.