ದೇಶದಲ್ಲಿ ಕೊರೊನಾ ಇಳಿಕೆಯಾದ್ರೂ, ಓಮೈಕ್ರಾನ್ ಆತಂಕ ಹೆಚ್ಚು…!
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೇನೋ ದಿನೇ ದಿನೇ ಕಡಿಮೆಯಾಗ್ತಿದೆ. ಆದ್ರೆ ಇದು ಸಮಾಧಾನಕರ ಸಂಗತಿಯೇನಲ್ಲ..
ಯಾಕಂದ್ರೆ ಕೊರೊನಾ ವೈರಸ್ನ ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ಪ್ರಕರಣಗಳು ದೇಶದಲ್ಲಿ ಏರಿಕೆಯಾಗ್ತಲೇ ಇದೆ.. ಸೋಮವಾರ 152 ಇದ್ದ ಪ್ರಕರಣಗಳು ಮಂಗಳವಾರ ಬೆಳಗ್ಗೆ ಹೊತ್ತಿಗೆ 200ಕ್ಕೆ ತಲುಪಿವೆ. ಭಾರತದಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ಒಮಿಕ್ರಾನ್ ಪ್ರಕರಣಗಳು ದುಪ್ಪಟ್ಟಾಗ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ..
ಯುಪಿ ಚುನಾವಣೆ ಹೊಸ್ತಿಲಲ್ಲಿ ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್ : 1 ಕೋಟಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ಫ್ರೀ..!
ಅಂದ್ಹಾಗೆ ದೇಶದದಲ್ಲಿ ಕಳೆದ 24 ಗಂಟೆಗಳಲ್ಲಿ 5326 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.. ನಿನ್ನೆ 453 ಮಂದಿ ಮಹಾಮಾರಿಯಿಂದ ಉಸಿರು ನಿಲ್ಲಿಸಿದ್ದಾರೆ.. ಒಟ್ಟು ಸಾವಿನ ಸಂಖ್ಯೆ 4,78,007ಕ್ಕೆ ತಲುಪಿದೆ. ಇದೇ ಅವಧಿಯಲ್ಲಿಯೇ 8,043 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..
ದೇಶದಲ್ಲಿ ಈ ವರೆಗೆ 3,41,95,060 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 79,097 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.