ಸಿಂಗಾಪುರಕ್ಕೂ ಕಾಲಿಟ್ಟ ಓಮಿಕ್ರಾನ್ : ಎರಡು ಪ್ರಕರಣಗಳು ಪತ್ತೆ..!
ಸಿಂಗಾಪುರ : ಇನ್ನೇನು ಕೊರೊನಾ ಕಡಿಮೆಯಾಯ್ತು ಅನ್ನೋ ಹೊತ್ತಲ್ಲೇ ವಿಶ್ವಾದ್ಯಂತ ಕೊರೊನಾದ ಹೊಸ ರೂಪಾಂತರಿ ಓಮ್ರಿಕಾನ್ ಭೀತಿ ಹೆಚ್ಚಾಗಿದೆ.. ಅನೇಕ ದೇಶಗಳಲ್ಲಿ ಓನ್ರಿಕಾನ್ ಕೇಸ್ ಗಳು ಪತ್ತೆಯಾಗಿವೆ.. ಭಾರತದಲ್ಲಿಯೂ ಅದ್ರಲ್ಲೂ ಕರ್ನಾಟಕದಲ್ಲೇ 3 ಓಮ್ರಿಕಾನ್ ಕೇಸ್ ಗಳು ಪತ್ತೆಯಾಗಿದೆ.. ಇದೀಗ ಸಿಂಗಾಪುರಕ್ಕೂ ಕಾಲಿಟ್ಟಿದೆ..
ದಕ್ಷಿಣ ಆಫ್ರಿಕಾದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದ (omricon cases) ಓಮಿಕ್ರಾನ್ ಪತ್ತೆಯಾಗಿದೆ.
ಜೋಹನ್ಸ್ ಬರ್ಗ್‌ನಿಂದ ಪ್ರಯಾಣಿಸಿದ್ದ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿರುವುದು ಪ್ರಾಥಮಿಕ ಪರೀಕ್ಷೆಯಿಂದ ದೃಢಪಟ್ಟಿದೆ. ಅವರನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸೋಂಕಿತರು ಪ್ರಯಾಣಿಸಿದ್ದ ವಿಮಾನದಲ್ಲೇ 19 ಮಂದಿ ಪ್ರಯಾಣ ಬೆಳೆಸಿದ್ದರು. ಅವರನ್ನೂ ಪರೀಕ್ಷೆ ಒಳಪಡಿಸಲಾಗಿದ್ದು, ಕೋವಿಡ್ ನೆಗೆಟಿವ್ ಬಂದಿದೆ. ಆದಾಗ್ಯೂ ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಓಮಿಕ್ರಾನ್ ಸೋಂಕಿತರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಕೆಮ್ಮು ಮತ್ತು ಗಂಟಲು ಕೆರೆತದ ಸೌಮ್ಯ ಲಕ್ಷಣಗಳು ಇದ್ದ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸೋಂಕಿತರಲ್ಲಿ ಒಬ್ಬರು 44 ವಯಸ್ಸಿನ (ಪುರುಷ) ಸಿಂಗಾಪುರ ಮೂಲದವರೇ ಆಗಿದ್ದಾರೆ. ಅವರು ಮೊಜಾಂಬಿಕ್ ಮೂಲಕ ಜೋಹಾನ್ಸ್‌ಬರ್ಗ್‌ಗೆ ತೆರಳಿದ್ದರು. ನ.29ರಂದು ಅವರು ಮೆಜಾಂಬಿಕ್‌ನಿಂದ ತೆರಳುವಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಬಂದಿತ್ತು.
ಮತ್ತೊಬ್ಬರು 41 ವಯಸ್ಸಿನ ಮಹಿಳೆ ಸಿಂಗಾಪುರದವರೇ ಆಗಿದ್ದು, ದಕ್ಷಿಣ ಆಫ್ರಿಕಾದಿಂದ ನೇರವಾಗಿ ಆಗಮಿಸಿದ್ದರು ಎಂದು ಸಚಿವಾಲಯವು ಮಾಹಿತಿ ನೀಡಿದೆ.








