ಕರ್ನಾಟಕದಲ್ಲಿ 2 Omricon ಪ್ರಕರಣಗಳು ಪತ್ತೆ : ಭಾರತದಲ್ಲೇ ಮೊದಲ ಕೇಸ್..!
ಇನ್ನೇನು ಕೊರೊನಾ ಹಾವಳಿ ಕಡಿಮೆ ಆಗಿಯೇ ಹೋಯ್ತು ಅನ್ನೋ ಹೊತ್ತಲ್ಲೇ ಇಡೀ ವಿಶ್ವಾದ್ಯಂತ ಹೊಸ ರೂಪಾಂತರಿ ಓಮ್ರಿಕಾನ್ ಆತಂಕ ಸೃಷ್ಟಿಮಾಡಿದೆ.. ಇದೀಗ ಭಾರತದಲ್ಲಿ ಅದ್ರಲ್ಲೂ ಕರ್ನಾಟಕದಲ್ಲೇ ಓಮ್ರಿಕಾನ್ ಆರ್ಭಟ ಶುರುವಾಗಿಬಿಟ್ಟಿದೆ.. ಹೌಎದು ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ 2 ಓಮ್ರಿಕಾನ್ ಕೇಸ್ ಗಳು ಪತ್ತೆಯಾಗಿರೋದು ರಾಜ್ಯದ ಜನರು ಮತ್ತಷ್ಟು ಗಾಬರಿಯಾಗುವಂತೆ ಮಾಡಿದೆ..
(Omicron Cases) ರಾಜ್ಯದಲ್ಲಿ 2 ಓಮ್ರಿಕಾನ್ ಪ್ರಕರಣಗಳು ಪತ್ತೆಯಾಗಿವೆ.. ಈ ಬಗ್ಗೆ ವಿಧಾನಸೌಧದಲ್ಲಿ ಸಚಿವ ಅಶ್ವಥ್ ನಾರಾಯಣ್ ಅಧಿಕೃತ ಮಾಹಿತಿ ನೀಡಿದ್ದಾರೆ. ನವೆಂಬರ್ 9ರಂದು ಒಬ್ಬರು ಹಾಗೂ ನವೆಂಬರ್ 20ರಂದು ಇಬ್ಬರು ನಗರಕ್ಕೆ ಆಗಮಿಸಿದ್ದರು. ಸೌತ್ ಆಫ್ರಿಕಾ ಮೂಲದ ಈ ಇಬ್ಬರು ವ್ಯಕ್ತಿಗಳು ಖಾಸಗಿ ಕೆಲಸಕ್ಕಾಗಿ ಆಗಮಿಸಿದ್ದರು. ಡಿ.9ರಂದು ನಗರಕ್ಕೆ ಬಂದ 45 ವರ್ಷದ ವ್ಯಕ್ತಿ ಹಾಗೂ ಡಿ.20ರಂದು ನಗರಕ್ಕೆ ಬಂದಿರುವ 65 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಸೋಂಕಿತರಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನ ಪ್ರೈಮರಿ ಮತ್ತು ಸೆಕೆಂಡರಿ ಐಸೋಲೇಟ್ ಮಾಡಲಾಗಿದೆ. ಈ ವೈರಸ್ನಿಂದ ಆಗುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಈ ವೈರಸ್ ನಿಂದ ಜೀವಕ್ಕೆ ಏನು ಅಪಾಯವಿಲ್ಲ ಎಂದಿದ್ಧಾರೆ. ಆದ್ರೆ ವಿಶ್ವದ್ಯಾಂತ ಆತಂಕ ಸೃಷ್ಟಿಸಿರುವ ಈ ವೈರಸ್ ಇದೀಗ ರಾಜ್ಯದಲ್ಲೂ ಕಾಣಿಸಿಕೊಂಡಿರೋದು ಅದ್ರಲ್ಲೂ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ..








