ಬೆಂಗಳೂರು: ಭಾನುವಾರ ಹನುಮ ಜಯಂತಿ ಎಂದು ನೆನಪಿಸಿದರೂ ನಾಟಿ ಕೋಳಿ ಸಾರು ಊಟ ಮಾಡಿದ್ದ ಸಿದ್ದರಾಮಯ್ಯ, ತಮ್ಮ ಆಪ್ತನಿಗೆ `ಯಾವ ಜಯಂತಿ, ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ ? ಏನೂ ಆಗಲ್ಲ ತಿನ್ನು ‘ ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು, ಗೊತ್ತಿಲ್ಲ ಅಲ್ವಾ ? ಚಿಕನ್ ತಿನ್ನು’ ಎಂದಿದ್ದರು.
ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಯಿ, ಇವರೇ ನಿಮ್ಮ ತಂದೆ ಎಂದರೆ ಮಕ್ಕಳು ನಂಬುತ್ತಾರೆ, ಆದರೆ ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ದೋಷ ಎಂದು ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ ರವಿ, ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು, ನಂಬಿಕೆಗಳ ಜಗತ್ತು ಇರೋದು, ಕೆಲವರಿಗೆ ಭಗವಂತ ಕಾಣಲ್ಲಮ ಕೆಲವರಿಗೆ ಎಲ್ಲ ಕಡೆ ಕಾಣ್ತಾನೆ. ನೋಡುವ ದೃಷ್ಟಿ ಇರೋರಿಗೆ ಭಗವಂತನನ್ನು ತೋರಿಸಬಹುದು. ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣಲ್ಲ.
ಸಿದ್ದರಾಮಯ್ಯ ಅವರ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ, ಸಹವಾಸ ದೋಷದಿಂದ ಬಂದಿರೋದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವ ಕಾರಣಕ್ಕೆ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಸಿದ್ದರಾಮಯ್ಯ ಅವರೂ ಕೆಟ್ಟಿದ್ದಾರೆ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನೆಲದ ನಂಬಿಕೆಗಳಿಗೆ ಅವಮಾನ..!
ಈ ನೆಲದ ನಂಬಿಕೆಗಳಿಗೆ ಈ ರೀತಿ ಅವಮಾನ ಮಾಡುವುದೇ ಜಾತ್ಯತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರು. ಇವರಂತೆ ಮತ್ತೊಬ್ಬ ನಾಯಕರು ಈ ಹಿಂದೆ ಶ್ರೀರಾಮನ ಬರ್ತ್ ಸರ್ಟಿಫಿಕೇಟ್ ಎಲ್ಲಿ ಎಂದು ಕೇಳಿದ್ದು ನೆನಪಿಗೆ ಬರುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರು ಹೆಸರು ಲ್ಲೇಖಿಸಿದರೆ ಟ್ವಿಟರ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








