152 ರನ್ ಮುನ್ನಡೆಯೊಂದಿಗೆ 4ನೇ ದಿನದಾಟ ಆರಂಭಿಸಿದ ಇಂಡಿಯಾ
ಸೆಂಚೂರಿಯನ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ನ ನಾಲ್ಕನೇ ದಿನದ ಆಟ ಆರಂಭವಾಗಿದೆ. ಎರಡನೇ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಸ್ಕೋರ್ 1 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿದ್ದ ಭಾರತ ತಂಡ 152 ರನ್ ಮುನ್ನಡೆಯಲ್ಲಿದೆ.
ಆರಂಭಿಕ ಕೆಎಲ್ ರಾಹುಲ್ 11 ಮತ್ತು ನೈಟ್ ವಾಚ್ಮನ್ ಶಾರ್ದೂಲ್ ಠಾಕೂರ್ 4 ರನ್ ಗಳಿಸಿ ಅಜೇಯರಾಗಿದ್ದಾರೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ನಾಲ್ಕನೇ ದಿನ ಸೆಂಚೂರಿಯನ್ನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ, ಆದರೆ ಬಿಸಿಲಿನ ಜೊತೆಗೆ ಆಕಾಶದಲ್ಲಿ ಮೋಡ ಕವಿದಿರಲಿದೆ. ತಾಪಮಾನವು 28-17 ಡಿಗ್ರಿ ವ್ಯಾಪ್ತಿಯಲ್ಲಿ ಉಳಿಯಬಹುದು. ಗಾಳಿಯು ಗಂಟೆಗೆ 15-30 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಮತ್ತು ತೇವಾಂಶವು 47-70% ರಷ್ಟಿರುವ ಸಾಧ್ಯತೆಯಿದೆ.
ನಾಲ್ಕನೇ ದಿನ ಟೀಂ ಇಂಡಿಯಾದ ಕಣ್ಣು ದೊಡ್ಡ ಸ್ಕೋರ್ ಮಾಡುವತ್ತ ನೆಟ್ಟಿದೆ. ಆದರೆ, ಈ ಪಂದ್ಯದಲ್ಲಿ ತಂಡ ಹಿಡಿತ ಕಾಯ್ದುಕೊಳ್ಳಬೇಕಾದರೆ ಮೂರನೇ ದಿನದ ಪ್ರಮಾದಗಳಿಂದ ಪಾರಾಗಬೇಕಾಗುತ್ತದೆ. ಪಂದ್ಯದ ಮೂರನೇ ದಿನದಂದು, ಮೊದಲ ಸೆಷನ್ನಲ್ಲಿ ಭಾರತದ ಬ್ಯಾಟಿಂಗ್ ಅನ್ನು ಒಂದು ಗಂಟೆಗೆ ಇಳಿಸಲಾಯಿತು. ಇಂದು ತಂಡ ದೊಡ್ಡ ಮೊತ್ತ ಗಳಿಸಬೇಕಾದರೆ ಇನಿಂಗ್ಸ್ ಅನ್ನು ತಾಳ್ಮೆಯಿಂದ ಕಟ್ಟಬೇಕಿದೆ.
ಟೀಂ ಇಂಡಿಯಾದ 297 ರನ್ಗಳಿಗೆ ಉತ್ತರವಾಗಿ ಆಫ್ರಿಕನ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 197 ರನ್ಗಳಿಗೆ ಆಲೌಟ್ ಆಗಿತ್ತು. ತೆಂಬಾ ಬೌಮಾ (52 ರನ್) ಬಿಟ್ಟರೆ ತಂಡದ ಒಬ್ಬ ಆಟಗಾರನೂ ಕ್ರೀಸ್ ನಲ್ಲಿ ನಿಲ್ಲುವ ಧೈರ್ಯ ತೋರಲಿಲ್ಲ. ಕೆಲವು ಆಟಗಾರರು ಉತ್ತಮ ಆರಂಭ ಪಡೆದರೂ ಅದನ್ನ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು.