`ಮತ್ತೊಮ್ಮೆ ಸಿದ್ದರಾಮಯ್ಯ Siddaramaiah ಮುಖ್ಯಮಂತ್ರಿ’ : ಗೊರವಯ್ಯ ಭವಿಷ್ಯ
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿ ಆಗ್ತಾರೆ ಎಂದು ಮೈಲಾರ ಲಿಂಗೇಶ್ವರ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ಮೈಲಾರ ಲಿಂಗೇಶ್ವರ 3 ಜನ ಗೊರವಯ್ಯರು ಭವಿಷ್ಯ ಹೇಳಿದ್ದು, ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದಲೇ ಚುನಾವಣೆಗೆ ನಿಂತು ಗೆಲ್ಲುತ್ತಾರೆ. ಹಾಗೆ ಅವರು ಮುಂದಿನ ಬಾರಿ ಮುಖ್ಯಮಂತ್ರಿ ಆಗ್ತಾರೆ ಎಂದು ಸಿದ್ದರಾಮಯ್ಯ ನಿವಾಸದ ಅಂಗಳದಲ್ಲಿ ಸಿದ್ದರಾಮಯ್ಯ ಬೆಂಬಲಿಗರ ಮುಂದೆ ಮೂವರು ಗೊರವಯ್ಯರು ಭವಿಷ್ಯ ನುಡಿದಿದ್ದಾರೆ.
ಮೈಲಾರ ಲಿಂಗೇಶ್ವರರ ಗೊರವಯ್ಯರು ನುಡಿಯುವ ಭವಿಷ್ಯವಾಣಿ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಇವರು ನುಡಿಯುವ ಭವಿಷ್ಯ ನೂರಕ್ಕೆ ನೂರು ಸತ್ಯವಾಗುತ್ತದೆ ಎಂದು ಸಾಕಷ್ಟು ಮಂದಿ ನಂಬಿದ್ದಾರೆ. ಇದೀಗ ಇವರು ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.









