ಬೆಂಗಳೂರು: ಸಮಯ ಮನುಷ್ಯನನ್ನು ಹೇಗೆಲ್ಲಾ ಮಾಡಿಸುತ್ತೆ ಅನ್ನೋದಕ್ಕೆ ನಮ್ಮ ಆಗಾಗ ಉದಾಹರಣೆಗಳು ಬಂದು ಹೋಗ್ತಾನೆ ಇರ್ತವೆ.
ಇದಕ್ಕೆ ತಾಜಾ ಉದಾಹರಣೆ ಒಂದು ಕಾಲದಲ್ಲಿ ಹಾವು-ಮುಂಗಸಿಯಂತಿದ್ದ ನಟಿ ಮಣಿಗಳಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ.
ಹೌದು, ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ರಾಣಿಯರಂತೆ ಮೆರೆದಿದ್ದ ಈ ನಟಿಯರು ಈಗ ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆಗಿ ಪೊಲೀಸರ ಕಾವಲಿನಲ್ಲಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಉಳಿಯುವ ಸ್ಥಿತಿ ಬಂದೊದಗಿದೆ. ಇದಕ್ಕೇ ಅಲ್ವಾ ಕಾಲದ ಮಹಿಮೆ, ಹೇಗೆ ಎಲ್ಲರನ್ನೂ ತನ್ನ ತಾಳಕ್ಕೆ ಕುಣಿಸುತ್ತದೆ.
ಆದರೆ, ಡ್ರಗ್ಸ್ ಕೇಸಲ್ಲಿ ಮೊದಲು ಅರೆಸ್ಟ್ ಆಗಿದ್ದು ರಾಗಿಣಿ ದ್ವಿವೇದಿ. ನಾಲ್ಕು ದಿನಗಳ ಬಳಿಕ ಕಿರಿಕ್ ನಟಿ ಸಂಜನಾ ಗಲ್ರಾನಿಗೂ ಸಿಸಿಬಿ ಪೊಲೀಸರು ಖೆಡ್ಡಾ ತೋಡಿದ್ರು. ವಿಪರ್ಯಾಸ ಅಂದ್ರೆ, ಫಿಲ್ಮ್ ಇಂಡಸ್ತ್ರಿಯಲ್ಲಿ ತಮ್ಮದೇ ಆದ ಹವಾ ಮೆಂಟೇನ್ ಮಾಡಿಕೊಂಡಿದ್ದ ಇಬ್ಬರೂ ನಟಿಯರು, ಪೈಪೋಟಿ ಕಾರಣಕ್ಕೋ ಏನೋ ವಿರೋಧಿಗಳಾದರು. ಒಬ್ಬರನ್ನು ಕಂಡರೆ ಮತ್ತೊಬ್ಬರು ಆಗುತ್ತಿರಲಿಲ್ಲ. ಅಕ್ಷರಶಃ ಹಾವು-ಮುಂಗುಸಿಯಂತೆ ಆಗಿದ್ರು. ಆದ್ರೀಗ ಅವ್ರು ಬೆಸ್ಟ್ ಫ್ರೆಂಡ್ಸ್ ಅಂದ್ರೆ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ಮಂಗಳವಾರ ಅರೆಸ್ಟ್ ಆದ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಮೊದಲೇ ಅರೆಸ್ಟ್ ಆಗಿದ್ದ ರಾಗಿಣಿ ಇದ್ದ ಕೊಠಡಿಯಲ್ಲೇ ಸಂಜನಾಳನ್ನು ಇರಿಸಲಾಗಿದೆ. ಮೊದಲ ದಿನ ರಾಗಿಣಿ ಜತೆ ಜಗಳವಾಡಿದ್ದ ಸಂಜನಾ, ನಿನ್ನಿಂದಲೇ ನಾನು ಅರೆಸ್ಟ್ ಆಗುವ ಸ್ಥಿತಿ ಬಂದಿದೆ. `ಆರ್ ಯು ಹ್ಯಾಪಿ ನೌ ‘ ಅಂದರೆ ಈಗ ನಿನಗೆ ಸಮಾಧಾನ ಆಯ್ತಾ ಎಂದು ಕೂಗಾಡಿದ್ದಳಂತೆ, ಕಣ್ಣೀರು ಹಾಕಿದ್ದಳಂತೆ. ಆದ್ರೆ, ಅದಕ್ಕೆ ರಾಗಿಣಿ ತಲೆ ಕೆಡಿಸಿಕೊಂಡಿಲಿಲ್ಲ.
ಆದ್ರೆ, ಇಂದು ಇಬ್ಬರನ್ನೂ ಸಿಸಿಬಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಂದೇ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಬಂದಿದ್ರು. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಕಿತ್ತಾಡಿಕೊಂಡು ಹಾವು-ಮುಂಗಸಿಯಂತೆ ಆಡುತ್ತಿದ್ದವರು ಫ್ರೆಂಡ್ಸ್ ಆಗಿದ್ದಾರೆ. ಪರಸ್ಪರ ಮಾತನಾಡಿಕೊಂಡು ಒಬ್ಬರಿಗೊಬ್ಬರು ಹೆಲ್ಪ್ ಮಾಡಿಕೊಳ್ಳುತ್ತಿದ್ದಾರೆ.
ಮೆಡಿಕಲ್ ಟೆಸ್ಟ್ ಮುಗಿಸಿ ವಾಪಸ್ ಹೋಗುವಾಗಲೂ ಖುಷಿ ಖುಷಿಯಾಗಿಯೇ ಇದ್ದರು. ಇದೇ ಅಲ್ವಾ, ಕಾಲದ ಮಹಿಮೆ. ಒಂದು ಕಾಲದಲ್ಲಿ ವಿರೋಧಿಗಳಾಗಿದ್ದವರು ಹತ್ತಿರ ಹತ್ತಿರ ಆಗುತ್ತಾರೆ. ಹತ್ತಿರ ಇದ್ದವರು ಕಡು ವಿರೋಧಿಗಳಾಗುತ್ತಾರೆ. ಕಾಲಾಯ ತಸ್ಮೈ ನಮಹಾಃ ಎಂಬ ಮಾತಿಗೆ ರಾಗಿಣಿ-ಸಂಜನಾ ತಕ್ಕಾ ಉದಾಹರಣೆಯಾಗಿದ್ದಾರೆ.








