`ಒಂದು ಗಂಟೆಯ ಕಥೆ’ ಸಿನಿಮಾ ರಿಲೀಸ್..!
ನಿರ್ದೇಶಕ ದ್ವಾರ್ಕಿ ರಾಘವ್ ನಿರ್ದೇಶನದ ಒಂದು ಗಂಟೆಯ ಕಥೆ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರವನ್ನ ರಿಯಲ್ ವೆಲ್ತ್ ವೆಂಚರ್ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ಅವರು ನಿರ್ಮಿಸಿದ್ದಾರೆ.ದುಶ್ಯಂತ್ ಹಾಗೂ ಶ್ವೇತ ದಾಕೋಜು ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಒಂದು ಗಂಟೆಯ ಕಥೆ ಹಾಸ್ಯಮಯ ಸಿನಿಮಾವಾಗಿದ್ದು. ನೈಜ ಘಟನೆಯೊಂದಿಗೆ ವಿವರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕೆ ದ್ವಾರ್ಕಿ ರಾಘವ್ ಅವರು ಚಿತ್ರಕಥೆ ಬರೆದಿದ್ದಾರೆ. ಡೆನಿಸ್ ವಲ್ಲಭನ್ ಸಂಗೀತ ನೀಡಿದ್ದು, ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಗಣೇಶ್ ಮಲ್ಲಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನು ತಾರಾಬಳಗ ವಿಚಾರಕ್ಕೆ ಬಂದ್ರೆ ಅಜಯ್ ರಾಜ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ನಾಯಕಿ ಶನಾಯ ಕಾಟ್ವೆ. ಸ್ವಾತಿ ಶರ್ಮ,ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್, ನಾಗೇಂದ್ರ ಶಾ, ಚಂದ್ರಕಲಾ, ರೆಮೊ, ಮೇಫ ಜಕಾತಿ, ಜಯದೇವ್, ಸುಜಯ್, ಸೋಮು, ಎಂ.ಎನ್.ಲಕ್ಷ್ಮೀದೇವಿ ಚಿತ್ರದಲ್ಲಿದ್ದಾರೆ.









