ಹಾಸನ: ಕೆರೆ ಕೋಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದಿದ್ದು, ಮಣ್ಣಿನಡಿ ಸಿಲುಕಿ ಓರ್ವ ಸಾವನ್ನಪ್ಪಿದ್ದಾನೆ. ಅಲ್ಲದೇ, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಹಾಸನ (Hasan) ಜಿಲ್ಲೆ ಬೇಲೂರು (Beluru) ತಾಲ್ಲೂಕಿನ ಹನಿಕೆ ಗ್ರಾಮದ ಹತ್ತಿರ ನಡೆದಿದೆ. ಹೊಳೆನರಸೀಪುರದ ದರ್ಶನ್ ಕುಮಾರ್ (29) ಸಾವನ್ನಪ್ಪಿರುವ ದುರ್ದೈವಿ. ವಸಂತ್‌ಕುಮಾರ್ ಹಾಗೂ ಲೋಕಪ್ಪ ಗಾಯಾಳುಗಳು ಎನ್ನಲಾಗಿದೆ.
ಹಾಸನದ ಪ್ರಕಾಶ್ ಎಂಬುವವರು ಕೆರೆ ಕೋಡಿ ದುರಸ್ತಿ ಗುತ್ತಿಗೆ ಪಡೆದಿದ್ದರು. ಈ ವೇಳೆ ದರ್ಶನಕುಮಾರ್, ವಸಂತಕುಮಾರ್ ಹಾಗೂ ಲೋಕಪ್ಪ ಹನಿಕೆ ಗ್ರಾಮದ ಕೆರೆ ಕೋಡಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದಿಢೀರ್ ಮಣ್ಣು ಕುಸಿದಿದೆ.
ದರ್ಶನ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲೋಕಪ್ಪ ಹಾಗೂ ವಸಂತ್‌ಕುಮಾರ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








