ಚರಂಡಿ ವಿಷಯದಲ್ಲಿ ಆರಂಭಗೊಂಡ ಜಗಳ ಯುವಕನೋರ್ವನ ಕೊಲೆಯಲ್ಲಿ ಅಂತ್ಯ…
ಚರಂಡಿ ವಿಷಯದಲ್ಲಿ ಆರಂಭಗೊಂಡ ಕ್ಷುಲಕ ಜಗಳ ಯುವಕನೊಬ್ಬನನ್ನು ಕೊಲೆಯಯಲ್ಲಿ ಅಂತ್ಯವಾಗಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುಡಬೂಳ ಗ್ರಾಮದಲ್ಲಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಈ ಗಲಭೆಯಲ್ಲಿ ಆರು ಜನರು ದಾರುಣವಾಗಿ ಗಾಯಗೊಂಡಿದ್ದಾರೆ.
ಮುವತ್ತೆರಡು ವರ್ಷದ ವಿಶ್ವನಾಥ ಸಂಗಾವಿ ಕೊಲೆಯಾದ ದುರ್ದೈವಿ. ಮುಡಬೂಳ ಗ್ರಾಮದಲ್ಲಿ ಮನೆಯ ಎದುರಿನ ಚರಂಡಿ ವಿಷಯವಾಗಿ ನಿನ್ನೆ ಮಧ್ಯಾಹ್ನ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಮತ್ತೆ ಅದೇ ವಿಷಯವಾಗಿ ರಾತ್ರಿಯೂ ಕೂಡಾ ವಾಗ್ವಾದ ನಡೆದು ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ ಕೆಲವರು ಸಂಗಾವಿ ಕುಟುಂಬದವರ ಮೇಲೆ ಮಾರಕಾಸ್ತ್ರ, ಕಲ್ಲು ಕಟ್ಟಿಗೆಯಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಉದ್ರಿಕ್ತ ಗುಂಪು ಸಂಗಾವಿ ಮನೆಯ ಬಾಗಿಲು ಕಲ್ಲುಗಳಿಂದ ಹೊಡೆದು ಮುರಿದು ಹಾಕಿದ್ದಾರೆ.
ಘಟನೆಯಲ್ಲಿ ಸಂಗಾವಿಯನ್ನು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಅವರ ಕುಟುಂಬದಲ್ಲಿದ್ದ ಆರು ಜನರ ಸ್ಥಿತಿ ಗಂಭೀರವಾಗಿದ್ದು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ನಂತರ ದುಷ್ಕರ್ಮಿಗಳು ತೆಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.