ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಾಳೆ ಸರಳವಾಗಿ ಆನ್‍ಲೈನ್ ಸಮಾರಂಭವನ್ನು ಬಿಜೆಪಿ ಆಯೋಜಿಸಿದೆ.
ನಾಳೆ ಬೆಳಿಗ್ಗೆ 11ಕ್ಕೆ ಆನ್‍ಲೈನ್ ಮೂಲಕ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಸರ್ಕಾರದ ಒಂದು ವರ್ಷದ ಕಾರ್ಯನಿರ್ವಹಣಾ ವರದಿಯನ್ನು ರಾಜ್ಯದ ಜನತೆ ಮುಂದೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.
ಕಳೆದ ಮಂಗಳವಾರ ಲಾಕ್‍ಡೌನ್ ತೆರವು ಮಾಡುವ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಘೋಷಣೆ ಮಾಡಿ ರಾಜ್ಯದ ಜನತೆಯನ್ನುದ್ದೇಶಿ ಮಾತನಾಡಿದ್ದರು. ಜಾಲತಾಣಗಳ ಮೂಲಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ್ದ ಬಿಎಸ್‍ವೈ ಭಾಷಣವನ್ನು ಲಕ್ಷಾಂತರ ಮಂದಿ ಬಿಜೆಪಿ ಕಾರ್ಯಕರ್ತರು ವೀಕ್ಷಣೆ ಮಾಡಿದ್ದರು. ಅದೇ ರೀತಿ ನಾಳೆಯೂ ಸಾಮಾಜಿಕ ಜಾಲತಾಣಗಳ ಮೂಲಕ ಸಮಾರಂಭದ ನೇರ ಪ್ರಚಾರವನ್ನು ಆಯೋಜಿಸಲಾಗಿದೆ.
ಕೊರೊನಾ ಹಿನ್ನೆಲೆ ನಿರ್ಬಂಧಗಳು ಇರುವ ಹಿನ್ನೆಲೆಯಲ್ಲಿ ಅದ್ಧೂರಿ ಸಮಾರಂಭ ಮಾಡುವಂತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಟ್ಯಾಂತರ ಕಾರ್ಯಕರ್ತರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸುಲಭವಾಗಿ ತಲುಪಬಹುದು ಎಂಬುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಈಗಾಗಲೇ ಆಯೋಜಿಸಿದ್ದ ಕಾರ್ಯಕ್ರಮಗಳಿಂದ ಸಾಬೀತಾಗಿದೆ.
ಹೀಗಾಗಿ ಯಡಿಯೂರಪ್ಪ ಕೂಡ ನಾಳೆ ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮಾಡಿ ಒಂದು ವರ್ಷದ ಕಾರ್ಯನಿರ್ವಹಣಾ ವರದಿಯನ್ನು ಜನತೆ ಮುಂದೆ ಇಡಲು ನಿರ್ಧರಿಸಿದ್ದಾರೆ.
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








