ಈರುಳ್ಳಿಯು ಭಾರತೀಯ ಅಡುಗೆಯ ಅವಿಭಾಜ್ಯ ಅಂಶವಾಗಿದ್ದು, ಇದರ ಬೆಲೆ ಏರಿಕೆ ಸಾಮಾನ್ಯ ನಾಗರಿಕರ ದಿನನಿತ್ಯದ ಬದುಕಿಗೆ ದೊಡ್ಡ ಹೊಡೆತವನ್ನು ನೀಡುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಈರುಳ್ಳಿ ಬೆಲೆ ಕೆಜಿಗೆ ₹100 ಮುಟ್ಟಿದ್ದು, ಇದರಿಂದ ಗ್ರಾಹಕರು ಕಂಗೆಟ್ಟಿದ್ದಾರೆ. ದೇಶಾದ್ಯಂತ ಕೆಲವು ದಿನಗಳ ಹಿಂದೆ ಕೆಜಿಗೆ 50 ರೂ.ಗಳಷ್ಟಿದ್ದ ಈರುಳ್ಳಿ ಬೆಲೆ ಕೆಲವೆಡೆ ಕೆಜಿಗೆ 70-80ರೂ ಗೆ ಏರಿದೆ
ಬೆಲೆ ಏರಿಕೆಯ ಕಾರಣ:
ದೇಶದ ಪ್ರಮುಖ ಈರುಳ್ಳಿ ಉತ್ಪಾದಕ ಪ್ರದೇಶವಾದ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇತ್ತೀಚೆಗೆ ಎದುರಾದ ಹವಾಮಾನ ಸಮಸ್ಯೆಗಳು, ಮಳೆ ಹಾಗೂ ಬೆಳೆ ನಾಶದಿಂದ ಈರುಳ್ಳಿ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು, ತೀವ್ರ ಕೊರತೆಯನ್ನು ಸೃಷ್ಟಿಸಿದೆ.
ಇನ್ನು ಮಧ್ಯ ಪ್ರದೇಶ, ಪಂಜಾಬ್ ಹಾಗೂ ಕರ್ನಾಟಕದಲ್ಲಿ ಕೂಡಾ ಇದೇ ಪರಿಸ್ಥಿತಿಗಳು ಕಂಡುಬಂದಿವೆ.
ರೈತರಿಂದ ಮಾರುಕಟ್ಟೆಗೆ ಈರುಳ್ಳಿ ತಲುಪುವ ಅಂತರದಲ್ಲಿ ದುರುಪಯೋಗಗಳು ಬೆಲೆ ಏರಿಕೆಗೆ ಮತ್ತೊಂದು ಅಂಶವಾಗಿದೆ.
ಈ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ, ವಿಶೇಷವಾಗಿ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಸಂಬಂಧಿತ ಇಲಾಖೆಗಳು ತ್ವರಿತ ಕ್ರಮಗಳನ್ನು ಕೈಗೊಳ್ಳದೆ ಹೋದರೆ, ಈ ಬೆಲೆ ಏರಿಕೆ ಮುಂದಿನ ಕೆಲವು ವಾರಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.








