ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ 12 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಇಂದಿನಿಂದ ಆನ್ಲೈನ್-ಆಫ್ಲೈನ್ ತರಗತಿಗಳು ಬಂದ್ ಆಗಲಿವೆ.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ(ರುಪ್ಸಾ) ಇಂದಿನಿಂದ ಆನ್ಲೈನ್-ಆಫ್ಲೈನ್ ಕ್ಲಾಸ್ ಬಂದ್ ಮಾಡಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಖಾಸಗಿ ಶಾಲೆಗಳ ಒಕ್ಕೂಟ ತನ್ನ 15 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಸರ್ಕಾರದ ಕಡೆಯಿಂದ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಇಂದಿನಿಂದ ಆನ್ಲೈನ್-ಆಫ್ಲೈನ್ ಕ್ಲಾಸ್ ಬಂದ್ ಮಾಡುತ್ತೇವೆ. ಬರುವ ದಿನಗಳಲ್ಲಿ ಸರ್ಕಾರದ ನಿರ್ಲಕ್ಷ್ಯ ಮುಂದುವರೆದರೆ ಸಂಪೂರ್ಣ ಶೈಕ್ಷಣಿಕ ಚಟುವಟಿಕೆ ಬಂದ್ ಮಾಡಿ ಶಾಲೆಗಳಿಗೆ ಬೀಗ ಹಾಕಿ ಜನವರಿ 6ರಿಂದ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಎಚ್ಚರಿಕೆ ನೀಡಿದ್ದಾರೆ.
`ರುಪ್ಸಾ’ ಶಾಲೆಗಳ ಬೇಡಿಕೆಗಳು..
* ಖಾಸಗಿ ಶಾಲೆಗಳು ಬ್ಯಾಂಕ್ ಇಎಂಐ ಪಾವತಿ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಬೇಕು. ಕೋವಿಡ್ನಿಂದಾಗಿ ಬ್ಯಾಂಕ್ ಸಾಲ ಕಟ್ಟಲು ಆಗುತ್ತಿಲ್ಲ. ಹೀಗಾಗಿ ಸಾಲದ ಮೇಲಿನ ಇಎಂಐ ಪಾವತಿಯನ್ನು ವಿಸ್ತರಣೆ ಮಾಡಲು ಆಗ್ರಹಿಸಿವೆ.
* ಶಾಸಗಿ ಶಾಲೆಗಳು ಕಟ್ಟಡ ಸುರಕ್ಷತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು
* ಶಾಸಗಿ ಶಾಲೆಗಳಲ್ಲಿ ವಿದ್ಯಾಗಮ ನಡೆಸಲು ಸಾಧ್ಯವಿಲ್ಲ ಎಂದ ರುಪ್ಸಾ
* ಮಾನ್ಯತೆ ನವೀಕರಣದ ಕಠಿಣ ನಿಯಮಗಳನ್ನು ಸಡಿಲಿಸಬೇಕು
* ಖಾಸಗಿ ಶಾಲೆಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಆರ್ಥಿಕ ನೆರವು ನೀಡಬೇಕು
ಕುಸ್ಮಾ, ಕ್ಯಾಮ್ಸ್ ಸಂಘಟನೆಗಳ ಬೆಂಬಲ ಇಲ್ಲ
ಇಂದಿನಿಂದ ಆನ್ಲೈನ್-ಆಫ್ಲೈನ್ ಕ್ಲಾಸ್ ಬಂದ್ ಮಾಡುವ ರುಪ್ಸಾ ಹೋರಾಟಕ್ಕೆ ಖಾಸಗಿ ಶಾಲೆಗಳ ಸಂಘ(ಕುಸ್ಮಾ), ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಬೆಂಬಲ ಇಲ್ಲ ಎಂದು ತಿಳಿಸಿವೆ.
ರುಪ್ಸಾ ಹೋರಾಟಕ್ಕೆ ನಮಗೂ ಸಂಬಂಧ ಇಲ್ಲ. ಇತ್ತೀಚೆಗೆ ನಾವು ನಡೆಸಿದ ಪ್ರತಿಭಟನೆ ವೇಳೆ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಜನವರಿ 1ರಿಂದ ಶಾಲೆಗಳು ಆರಂಭವಾಗುತ್ತಿವೆ. ಹೀಗಾಗಿ ನಮ್ಮ ಸಂಘಟನೆ ವ್ಯಾಪತಿಗೆ ಬರುವ ಶಾಲೆಗಳಲ್ಲಿ ಆನ್ಲೈನ್, ಆಫ್ಲೈನ್ ಕ್ಲಾಸ್ ಬಂದ್ ಮಾಡುವುದಿಲ್ಲ ಎಂದು ತಿಳಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel