ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಕಳೆದ 4-5 ತಿಂಗಳಿಂದ ನಡೆಯುತ್ತಿರುವ ಆನ್‍ಲೈನ್ ಶಿಕ್ಷಣದಿಂದ ಮಕ್ಕಳ ಆರೋಗ್ಯ ಹಾಗೂ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಆನ್‍ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ನಡೆಸುವಂತೆ ಶಿಕ್ಷಣ ತಜ್ಞರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಆನ್‍ಲೈನ್ ಶಿಕ್ಷಣ ಬಗ್ಗೆ ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನೇ ಧಿಕ್ಕರಿಸಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಆನ್‍ಲೈನ್ ಶಿಕ್ಷಣ ನೀಡುತ್ತಿವೆ. 1-5ನೇ ತರಗತಿವರೆಗೆ ವಾರದಲ್ಲಿ 2 ದಿನ ಮಾತ್ರ 30 ನಿಮಿಷ ಶಿಕ್ಷಣ ಮಾಡುವಂತೆ ಸರ್ಕಾರ ಗೈಡ್‍ಲೈನ್ಸ್ ನೀಡಿತ್ತು.
ಆದರೆ, ದಿನಕ್ಕೆ 4-5 ಗಂಟೆಗಳ ಕಾಲ ನಿರಂತರವಾಗಿ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ಕೆಲ ಶಾಲೆಗಳು ನಡೆಸುತ್ತಿರುವುದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ. ಮಕ್ಕಳಲ್ಲಿ ಶೇ.30ರಷ್ಟು ಕಣ್ಣಿನ ಸಮಸ್ಯೆ ಹೆಚ್ಚಳವಾಗಿದೆ. ಆನ್‍ಲೈನ್ ಶಿಕ್ಷಣದಿಂದ ಒತ್ತಡ ಹೆಚ್ಚಾಗಿ ನಿದ್ರಾಹೀನತೆ ಸೇರಿದಂತೆ ಹಲವು ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ತಜ್ಞರು ಸರ್ಕಾರಕ್ಕೆ ನೀಡಿರುವ ಸಲಹೆಗಳ ಅಂಶಗಳು ಇಂತಿವೆ..
* ನಿರಂತರ ಮೊಬೈಲ್, ಲ್ಯಾಪ್‍ಟಾಪ್ ವೀಕ್ಷಣೆಯಿಂದ ಮಕ್ಕಳಲ್ಲಿ ಶೇ.30ರಷ್ಟು ಕಣ್ಣಿನ ಸಮಸ್ಯೆ ಹೆಚ್ಚಳ
* ಆನ್‍ಲೈನ್ ಶಿಕ್ಷಣದಿಂದ ಮಕ್ಕಳ ಕಣ್ಣು ಹಾಗೂ ಕಿವಿಗೆ ಅಪಾಯ
* ಕಣ್ಣು ತುರಿಕೆಯಿಂದ ಕಣ್ಣು ಒರೆಸಿಕೊಳ್ಳುವುದರಿಂದ ಡ್ರೈ ಐ ಆಗುವ ಸಾಧ್ಯತೆ
* ಕಣ್ಣು ಬ್ಲಿಂಕ್ ಮಾಡದೇ ಮೊಬೈಲ್ ನೋಡುವುದರಿಂದ ಕಣ್ಣಿಗೆ ಡ್ರೈನೆಸ್ ಬರಬಹುದು
* ಆನ್‍ಲೈನ್ ಶಿಕ್ಷಣದಿಂದ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ ನಿದ್ರಾಹೀನತೆ ಸಮಸ್ಯೆ ಹೆಚ್ಚಳ
* ನಿದ್ರಾಹೀನತೆಯಿಂದ ಮಕ್ಕಳಲ್ಲಿ ಕಲಿಕೆ ಆಸಕ್ತಿ ಕಡಿಮೆಯಾಗಲಿದೆ
* ಮಕ್ಕಳಲ್ಲಿ ಕಿರಿಕಿರಿ, ಅಸಹನೆ, ತಲೆ ನೋವು ಹೆಚ್ಚಳ
* ಚಿಕ್ಕಮಕ್ಕಳಿಗೆ ಕಣ್ಣಿನ ಸಮಸ್ಯೆಯಿಂದ ಕನ್ನಡಕಗಳು ಹಾಕುವ ಸ್ಥಿತಿ
* ಸತತ 4 ಗಂಟೆ ಆನ್‍ಲೈನ್ ಕ್ಲಾಸ್‍ನಿಂದ 20 ನಿಮಿಷ ನಿದ್ರಾಹೀನತೆ
* ಕಂಪ್ಯೂಟರ್ ಸಿಂಡ್ರೋಮ್‍ನಿಂದ ಕಣ್ಣಿನ ಸಮಸ್ಯೆ ಹೆಚ್ಚಳ
* ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ
* ನಿರಂತರವಾಗಿ ಮೊಬೈಲ್ ನೋಡುವುದರಿಂದ ಕಣ್ಣಿನಲ್ಲಿ ತುರಿಕೆ ಶುರುವಾಗುತ್ತದೆ
* ಕಣ್ಣಿನ ಸಮಸ್ಯೆಯಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿದೆ
* ಆನ್‍ಲೈನ್ ಶಿಕ್ಷಣದ ಬಳಿಕ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಳ
* ಸರ್ಕಾರದ ಮಾರ್ಗಸೂಚಿಯನ್ನೇ ಧಿಕ್ಕರಿಸಿರುವ ಶಿಕ್ಷಣ ಸಂಸ್ಥೆಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel