ಆನ್ ಲೈನ್ ಶಾಪಿಂಗ್ ಮಾಡಿ ಟೋಪಿ ಹಾಕಿಸಿಕೊಂಡ ಎಷ್ಟೋ ಉದಾಹರಣೆಗಳು ನಮ್ಮೆದಿರಿದೆ. ಹಲವು ಬಾರಿ ಗ್ರಾಹಕರಿಗೆ ಅವರ ಆರ್ಡರ್ ಮಾಡಿದ ವಸ್ತುಗಳ ಬದಲಿಗೆ ಕಲ್ಲು ಕೊಟ್ಟು ಯಾಮಾರಿಸಿದ ಘಟನೆಗಳು ಬೆಳಕಿಗೆ ಬಂದಿದೆ. ಆದರೆ ಇಲ್ಲೊಬ್ಬ ಗ್ರಾಹಕನಿಗೆ ತಾನು ಬುಕ್ ಮಾಡಿದ ಉತ್ಪನ್ನದ ಜೊತೆಗೆ ಜೀವಂತ ಹುಳುಗಳು ಗಿಫ್ಟ್ ಆಗಿ ಸಿಕ್ಕಿವೆ..! ಹೌದು ನ್ಯೂಯಾರ್ಕ್ ವಾಸಿ ಬೆಂಜಮಿನ್ ಸ್ಮಿಥಿ ಅವರು ತಮಗೆ ಬಂದ ಪಾರ್ಸೆಲ್ ತೆರೆದಾಗ ಜೀವಭಯದಿಂದ ಬೆಸ್ತುಬಿದ್ದಿದ್ದಾರೆ. ಪಾರ್ಸೆಲ್ ಜೊತೆಗೆ ಜೀವಂತ ಹುಳುಗಳು ತೆವಳುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಇನ್ನೂ ತಮಗಾದ ಅನುಭವದ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ಗೆ ವಿವರಣೆ ನೀಡಿರುವ ಅವರು ಬಾಕ್ ಗೆ ಯಾವುದೇ ಹಾನಿಯಾಗಿರಲಿಲ್ಲ. ಅಲ್ಲದೇ ಭದ್ರವಾಗಿ ಅದನ್ನು ಮುಚ್ಚಲಾಗಿತ್ತು. ಹೀಗಿರುವಾಗ ಪ್ರಯಾಣ ಹಾಗೂ ವಿತರಣೆ ಸಂದರ್ಭದಲ್ಲಿ ಹುಳು ಬಾಕ್ಸ್ ಒಳಗೆ ಪ್ರವೇಶಿಸಿರುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಆನ್ ಲೈನ್ ಪ್ರಾಡಕ್ಟ್ ನ ಕಂಪನಿಯವರೊಂದಿಗೆ ಈ ಕುರಿತು ಚರ್ಚಿಸಿದ್ದು, ಕಂಪನಿ ಹಣ ಮರುಪಾವತಿಸಲು ಒಪ್ಪಿಕೊಂಡಿರುವುದಾಗಿಯೂ ತಿಳಿಸಿದ್ದಾರೆ.