ಆರ್ಡರ್ ಮಾಡಿದ್ದು ರಿಮೋಟ್ ಕಾರ್ … ಬಂದಿದ್ದ ಪಾರ್ಲೆಜಿ ಬಿಸ್ಕತ್ ಪ್ಯಾಕ್ … ಚಹಾ ಮಾಡೋದೇ ಬೆಸ್ಟ್ ಅಂದ ಗ್ರಾಹಕ..!
ನವದೆಹಲಿ : ಆನ್ ಲೈನ್ ಶಾಪಿಂಗ್ ನಲ್ಲಿ ಆಗಾಗ ಸಾಕಷ್ಟು ಎಡವಟ್ಟುಗಳಾಗುತ್ತಲೇ ಇರುತ್ತೆ.. ಆರ್ಡರ್ ಮಾಡೋದೆ ಒಂದಾದ್ರೆ ಕೈ ಸೇರುವುದೇ ಮತ್ತೊಂದಾಗಿರುತ್ತೆ.. ಇದೀಗ ಗ್ರಾಹಕರೊಬ್ಬರು ರಿಮೋಟ್ ಕಾರ್ ಆರ್ಡರ್ ಮಾಡಿದ್ದು, ಅವರಿಗೆ ಪಾರ್ಲೆ-ಜಿ ಬಿಸ್ಕತ್ ಪ್ಯಾಕ್ ಡೆಲಿವರಿಯಾಗಿದ್ದು, ಗ್ರಾಹಕ ಚಹಾ ಮಾಡೋದೇ ಲೇಸು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.. ಪೋಸ್ಟ್ ನಲ್ಲಿ ಪಾರ್ಲೆಜಿ ಪ್ಯಾಕ್ ಫೋಟೋ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ದೆಹಲಿಯ ಭಗವಾನ್ ನಗರ ಆಶ್ರಮ ಏರಿಯಾದಲ್ಲಿ ಗ್ರಾಹಕ ವಿಕ್ರಮ್ ಬುರಗೋಹೈನ್ ಎಂಬುವರು ಇ-ಕಾಮರ್ಸ್ ತಾಣದಲ್ಲಿ ರಿಮೋಟ್ ಕಂಟ್ರೋಲ್ ಕಾರ್ ಆರ್ಡರ್ ಮಾಡಿದ್ದರು. ಇವರಿಗೆ ಬಂದಿದ್ದು ಮಾತ್ರ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ ಆಗಿದೆ. ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ನಾನು ರಿಮೋಟ್ ಕಂಟ್ರೋಲ್ ಕಾರು ಆರ್ಡರ್ ಮಾಡಿದ್ದೇನು. ಆದರೆ ಈ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೇಟ್ ಬಂತು. ಈಗ ಚಹಾ ಮಾಡಲು ಹೋಗೋದೇ ಬೆಸ್ಟ್ ಎಂದು ಹಾಕಿದ್ದಾರೆ.
ಹನಿಮೂನ್ ನಲ್ಲಿ ತಾನು ತೃತೀಯ ಲಿಂಗೀಯ ಎಂದ ಪತಿ – ಪತ್ನಿ ಮಾಡಿದ್ದೇನು ಗೊತ್ತಾ..?








