Online shoping – ಆರ್ಡರ್ ಮಾಡಿದ್ದು ಲ್ಯಾಪ್ ಟಾಪ್ ಬಂದಿದ್ದು ಘಡಿ ಡಿಟರ್ಜೆಂಟ್ ಸೋಪ್…
ಭಾರತದ ಜನಪ್ರಿಯ ಆನ್ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಆಯೋಜಿಸಿರುವುದು ನಿಮಗೆ ಗೊತ್ತೇ ಇದೆ. ಈ ಆಫರ್ ಸಮಯದಲ್ಲಿ ಲ್ಯಾಪ್ ಟಾಪ್ ಬುಕ್ ಮಾಡಿದ ಗ್ರಾಹಕನೋರ್ವ ಮೋಸ ಹೋಗಿರುವ ಘಟನೆ ನಡೆದಿದೆ. ಲ್ಯಾಪ್ ಟಾಪ್ ಬದಲಿಗೆ ಘಡಿ ಡಿಟರ್ಜೆಂಟ್ ಸೋಪ್ ಪ್ಯಾಕೆಟ್ ಗಳನ್ನ ಡೆಲವರಿ ಮಾಡಲಾಗಿದೆ.
ಅಹಮದಾಬಾದ್ನಲ್ಲಿ ಐಐಎಂ ಪದವೀಧರ ವಿದ್ಯಾರ್ಥಿಯಾಗಿರುವ ಯಶಸ್ವಿ ಶರ್ಮಾ ಎನ್ನುವರು ಬಿಗ್ ಬಿಲಿಯನ್ ಸೇಲ್ನಲ್ಲಿ ತನ್ನ ತಂದೆಗಾಗಿ ಲ್ಯಾಪ್ಟಾಪ್ ಆರ್ಡರ್ ಮಾಡಿದ್ದರು. ಆರ್ಡರ್ ಬಂದ ನಂತರ ಪರಿಶೀಲಿಸದೇ OTP ಕೊಟ್ಟಿದ್ದಾರೆ.
ಆನಂತರ ಪ್ಯಾಕೇಜ್ ತೆರೆದ ಅವರಿಗೆ ಅದರಲ್ಲಿ ಡಿಟರ್ಜೆಂಟ್ ಸೋಪ್ ಬಾರ್ಗಳು ಮಾತ್ರ ಸಿಕ್ಕಿವೆ.! ಇಂತಹದೊಂದು ಆರೋಪವನ್ನು ಮಾಡಿರುವ ಯಶಸ್ವಿ ಶರ್ಮಾ ಅವರು ಈ ಬಗ್ಗೆ ಚಿತ್ರಗಳ ಸಾಕ್ಷಿ ಸಮೇತ ಟ್ವಿಟ್ಟರ್ ಹಂಚಿಕೊಂಡಿದ್ದು ಇದು ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಫ್ಲಿಪ್ಕಾರ್ಟ್ ವಕ್ತಾರರು, ಓಪನ್ ಬಾಕ್ಸ್ ಡೆಲಿವರಿ ಆಯ್ಕೆಯನ್ನು ನೀಡುವ ಈ ನಿರ್ದಿಷ್ಟ ಸಂದರ್ಭದಲ್ಲಿ ಗ್ರಾಹಕರು ಪ್ಯಾಕೇಜನ್ನು ತೆರೆಯದೇ ಡೆಲಿವರಿ ಪ್ರತಿನಿಧಿಯೊಂದಿಗೆ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ವಿವರಗಳನ್ನು ಪರಿಶೀಲಿಸಿದ ನಂತರ ನಮ್ಮ ಗ್ರಾಹಕ ಸೇವಾ ತಂಡವು ಗ್ರಾಹಕರಿಗೆ ಮರುಪಾವತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು 3-4 ಕರ್ತವ್ಯದ ದಿನಗಳಲ್ಲಿ ಹಣ ಅವರ ಖಾತೆಗೆ ಜಮಾ ಆಗಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ.
Online shopping – Ordered laptop and got Ghadi detergent soap…