ಮೈಸೂರು : ಕೊರೊನಾ ಮಧ್ಯೆ ವಿಶ್ವವಿಖ್ಯಾತ ದಸರೆಗೆ ಸಕಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಈ ಬಾರಿ ಜಂಬೂಸವಾರಿ ವೀಕ್ಷಣೆಗೆ ಎರಡು ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದ್ದು, ಕೊರೊನಾ ಕಾರಣದಿಂದಾಗಿ ಸರಳ ದಸರಾ ಆಚರಿಸಲು ನಿರ್ಧರಿಸಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ 250, ಅರಮನೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ 1 ಸಾವಿರ, ಜಂಬೂ ಸವಾರಿಗೆ 2 ಸಾವಿರ ಜನ ಸೇರಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ನಾಳೆ ಕೊರೊನಾ ನಿಯಮ ಉಲ್ಲಂಘಿಸಿದ್ರೆ ಎನ್ ಡಿಎಂಎ ಕೇಸ್ : ಕಮಲ್ ಪಂಥ್
ಜಂಬೂಸವಾರಿಗೆ ಭಾಗವಹಿಸುವ ಕಲಾವಿದರು 5 ದಿನ ಮುಚಿತವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಂಡು ವರದಿ ತರಬೇಕು. ನೆಗೆಟಿವ್ ಬಂದ ಕಲಾವಿದರಿಗೆ ಅವಕಾಶ ನೀಡಲಾಗುವುದು. ದಸರಾವನ್ನು ಪರಂಪರೆಯಾಗಿ ಮುಂದುವರೆಸಿಕೊಂಡು ಬರಲಾಗಿದೆ. ಹೀಗಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತೆ. ಈ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದರು.








