ಹುಬ್ಬಳ್ಳಿ : ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಇದೀಗ ಭಾರಿ ಚರ್ಚೆಗಳು ನಡೆಯುತ್ತಿವೆ. ಮೊಟ್ಟೆ ವಿತರಣೆ ಕಾರ್ಯಕ್ರಮವನ್ನ ಕೂಡಲೇ ನಿಲ್ಲಿಸಬೇಕೆಂದು ಕೆಲವರು ಆಗ್ರಹಿಸುತ್ತಿದ್ದರೇ ಹಲವರು ಮೊಟ್ಟೆ ವಿತರಣೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿ ಯೋಜನೆಯನ್ನು ಮುಂದುವರೆಸುವಂತೆ ಹೇಳುತ್ತಿದ್ದಾರೆ. vegetarians saaksha tv
ಈ ಮಧ್ಯೆ ಶಾಲೆಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮೊಟ್ಟೆಗೆ ಬದಲಾಗಿ ಸತ್ವಯುತ-ಸರ್ವಸಮ್ಮತ ಸಸ್ಯಹಾರ ಪದಾರ್ಥ ನೀಡಬೇಕು ಇದು ಸಾಧ್ಯವಾಗದಿದ್ದರೇ ಸರ್ಕಾರ ರಾಜ್ಯದ ಲಿಂಗಾಯತ ಧರ್ಮ, ಜೈನ ಧರ್ಮ ಬ್ರಾಹ್ಮಣ, ವೈಶ್ಯ ಸೇರಿದಂತೆ ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ಸಸ್ಯಹಾರಿ ಶಾಲೆಗಳನ್ನು ತೆರೆಯಬೇಕು ಎಂದು ಅಖಿಲ ಭಾರತ ಸಸ್ಯಹಾರಿ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಮೊಟ್ಟೆಗಿಂತಲೂ ಅಧಿಕ ಬಹುಪೋಷಕಾಂಶಗಳನ್ನೊಳಗೊಂಡ ಶುದ್ಧ ಸಸ್ಯಹಾರ ಪದಾರ್ಥಗಳನ್ನು ನೀಡಲು ಮನವಿ ಮಾಡಿಕೊಂಡರು.









