ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಈ ಬಾರಿಯಿಂದಲೇ ಓಪನ್ ಬುಕ್ ಮಾದರಿ ಪರೀಕ್ಷೆ
ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಈ ಬಾರಿಯಿಂದಲೇ ಓಪನ್ ಬುಕ್ ಮಾದರಿ ಪರೀಕ್ಷೆ ನಡೆಸಲಾಗುವುದು ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ ಗೆ ಈ ಬಾರಿಯಿಂದಲೇ ಓಪನ್ ಬುಕ್ ಮಾದರಿ ಪರೀಕ್ಷೆ ನಡೆಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮುಂದಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಪರೀಕ್ಷಾ ಪದ್ಧತಿಯಲ್ಲಿ ಸುಧಷಾರಣೆ ತರುವ ಉದ್ದೇಶದಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗ್ತಿದೆ. ಸಿವಿಲ್ , ಮೆಕಾನಿಕಲ್ , ಎಲೆಕ್ಟ್ರಿಕಲ್ ಕೋರ್ಸ್ ಗಳಿಗೆ ಕೈಪಿಡಿ ನೀಡಿ ಪರೀಕ್ಷೆ ನಡೆಸಲಾಗುವುದು. ಮತ್ತೆ ಕೆಲವು ವಿಷಯಗಳಿಗೆ ಬಹು ಆಯ್ಕೆ ಮಾದರಿ ಪರೀಕ್ಷೆ ನಡೆಸಲಾಗುವುದು. ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸಾಲಿನಿಂದಲೇ ಓಪನ್ ಬುಕ್ ಮಾದರಿ ಪರೀಕ್ಷೆ ನಡೆಯಲಿದೆ.