ದೇಶದಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು !!
ರಾಜಸ್ಥಾನ : ದೇಶದಲ್ಲಿ ಲಾಕ್ ಡೌನ್ ಸಡಿಲಗೊಂಡ ಬಳಿಕ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ದೇಶದಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು ಕೇಳಿ ಬರುತ್ತಿದೆ. ಆಪರೇಷನ್ ಕಮಲಕ್ಕೆ ಕೊರೊನಾ ಹೊಡೆತದಿಂದ ಸ್ವಲ್ಪ ಮಟ್ಟಿನ ರೀಲಿಫ್ ಸಿಕ್ಕಿತು. ಇದೀಗ ಲಾಲ್ ಡೌಕ್ ಸಡಿಲಗೊಂಡ ಬಳಿಕ ಮತ್ತೆ ಆಪರೇಷನ್ ಕಮಲದ ಕಾರ್ಯ ಚುರುಕುಗೊಂಡಿದೆ.
ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ಆಯಿತು ಇದೀಗ ರಾಜಸ್ಥಾನ ಸರದಿ ಶುರುವಾಗಿದೆ. ರಾಜಸ್ಥಾನದ ಅಶೋಕ ಗೆಹ್ಲೋಟ್ ನಾಯಕತ್ವ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಸಜ್ಜಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಈ ಬಗ್ಗೆ ರಾಜಸ್ಥಾನ ಕಾಂಗ್ರೆಸ್ ನಾಯಕ ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ ಎಸಿಬಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರಿಗೆ ಹಣ ಆಮಿಷ ತೋರಿಸಲಾಗುತ್ತಿದೆ. ಅಂತವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ದೂರಿನಲ್ಲಿ ಎಲ್ಲೂ ಬಿಜೆಪಿಯ ಹೆಸರು ಪ್ರಸ್ತಾಪ ಮಾಡಿಲ್ಲ.
ಇನ್ನೊಂದೆಡೆ ಕೇಂದ್ರ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರಂತರವಾದ ಆಪರೇಷನ್ ಕಮಲದ ಸದ್ದು ಕೇಳಿ ಬರುತ್ತಿದೆ. ರಾಜ್ಯದ ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಕೇಂದ್ರ ಬಿಜೆಪಿ ನಾಯಕರು ಸಿಂಹಪಾಲು ವಹಿಸಿದ್ದರು ಎನ್ನಲಾಗಿತ್ತು. ಇದಾದ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆದಿತ್ತು. ಇದೀಗ ರಾಜಸ್ಥಾನ ಕಡೆ ಆಪರೇಷನ್ ಕಮಲದ ಕಣ್ಣು ವಾಲಿದೆ. ಆ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಜೆಪಿ ಸಜ್ಜಾಗಿದೆ ಎಂದಹ ಹೇಳಲಾಗುತ್ತಿದೆ.








