ಅಂಚೆ ಇಲಾಖೆಯ ವಿಮಾ ಪಾಲಿಸಿಯನ್ನು ಪುನರುಜ್ಜೀವನಗೊಳಿಸಲು ಅವಕಾಶ
ಹೊಸದಿಲ್ಲಿ, ಜುಲೈ 4: ನೀವು ಕಳೆದ 5 ವರ್ಷಗಳಲ್ಲಿ ಅಂಚೆ ಜೀವ ವಿಮೆ (ಪಿಎಲ್ಐ) ಪ್ರೀಮಿಯಂ ಪಾವತಿಸದೇ ಇದ್ದಿದ್ದರೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (ಆರ್ಪಿಎಲ್ಐ) ದ ಪಾಲಿಸಿಗಳು ಕಳೆದು ಹೋಗಿದ್ದರೆ, ಅಂತಹ ಪಾಲಿಸಿಗಳ ಪುನರುಜ್ಜೀವನಕ್ಕೆ ಅಂಚೆ ಇಲಾಖೆಯ ಅಂಚೆ ಜೀವ ವಿಮಾ ಇಲಾಖೆಯು ಅವಕಾಶ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಅಂಚೆ ಇಲಾಖೆಯು ಟ್ವೀಟ್ ಮಾಡಿದ್ದು, ಕಳೆದ 5 ವರ್ಷಗಳಲ್ಲಿ ಪ್ರೀಮಿಯಂ ಪಾವತಿಸದ ಅಂಚೆ ಜೀವ ವಿಮೆ (ಪಿಎಲ್ಐ) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (ಆರ್ಪಿಎಲ್ಐ) ಯ ಕಳೆದುಹೋದ ಪಾಲಿಸಿಗಳ ಪುನರುಜ್ಜೀವನಕ್ಕೆ ಸುವರ್ಣಾವಕಾಶ. 31.08.2020 ರೊಳಗೆ ನಿಮ್ಮ ನೀತಿಯನ್ನು ಪುನರುಜ್ಜೀವನಗೊಳಿಸಿ. ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ ಎಂದು ಮಾಹಿತಿ ನೀಡಿದೆ.
ಅಂತಹ ವಿಮೆಗಳನ್ನು ಪುನರ್ ಪ್ರಾರಂಭಿಸಲು ಅವಕಾಶವಿದ್ದು, ಆಗಸ್ಟ್ 31 ರೊಳಗೆ ಅದನ್ನು ಪುನರುಜ್ಜೀವನಗೊಳಿಸಬೇಕಾಗುತ್ತದೆ ಎಂದು ತಿಳಿಸಿದೆ. ಇದಕ್ಕಾಗಿ ಪಾಲಿಸಿದಾರರು ಹತ್ತಿರದ ಅಂಚೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ, ಅಲ್ಲಿ ಲಿಖಿತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಂತ ತಿಳಿಸಿದೆ. ಅಂಚೆ ಇಲಾಖೆಯು ವಿಮಾ ಪಾಲಿಸಿಯನ್ನು ಪುನರುಜ್ಜೀವನಗೊಳಿಸಲು 1800 180 5232 ಸಂಖ್ಯೆಯನ್ನು ನೀಡಿದ್ದು, ಈ ಸಂಖ್ಯೆಯನ್ನು ಸಂಪರ್ಕಿಸಿ ಪಾಲಿಸಿದಾರರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲ ಕೊರೊನಾ ವೈರಸ್ ನ ಬಿಕ್ಕಟ್ಟಿನಿಂದಾಗಿ ಅಂಚೆ ಜೀವ ವಿಮೆ (ಪಿಎಲ್ಐ) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (ಆರ್‌ಪಿಎಲ್‌ಐ) ವಿಮೆ ಮಾಡಿದವರಿಗೆ ಪ್ರೀಮಿಯಂಗಳನ್ನು ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಅಂಚೆ ಇಲಾಖೆಯ ಎಲ್ಲಾ ಸೇವೆಗಳಿಗೆ ಮನೆಯಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಇದಕ್ಕಾಗಿ, ಇಲಾಖೆಯ ಮೊಬೈಲ್ ಅಪ್ಲಿಕೇಶನ್ ಪೋಸ್ಟ್‌ಇನ್‌ಫೋ ಮೊಬೈಲ್ ಅಪ್ಲಿಕೇಶನ್ ಅಥವಾ ಪೋಸ್ಟ್‌ಗಳ ಇಲಾಖೆಗೆ ಭೇಟಿ ನೀಡುವ ಮೂಲಕ ಯಾವುದೇ ಸೇವೆಗೆ ಅರ್ಜಿ ಸಲ್ಲಿಸಬಹುದಾಗಿದೆ.