ಬೆಂಗಳೂರು : ಇಂದು ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನ. 73ನೇ ವಸಂತಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯ ಅವರಿಗೆ ಹಲವಾರು ರಾಜಕೀಯ ಗಣ್ಯರು ಮತ್ತು ನಟರು ಶುಭಕೋರಿದ್ದಾರೆ.
ಅದರಂತೆ ಟ್ವಿಟ್ಟರ್ ನಲ್ಲಿ ನಟ ದುನಿಯಾ ವಿಜಯ್ ಸಿದ್ದುಗೆ ವಿಶ್ ಮಾಡಿದ್ದು, ಎಂಟೆದೆಯ ಬಂಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ. ಜೊತೆಗೆ ತಾವು ಕೈ ಮುಗಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
https://twitter.com/OfficialViji/status/1293415674283401216?s=20
ಸದ್ಯ ಕೊರೊನಾ ಸೋಂಕಿಗೆ ತುತ್ತಾಗಿರುವ ಸಿದ್ದರಾಮಯ್ಯ ಅವರು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಸೋಂಕಿನಿಂದ ಸಿದ್ದರಾಮಯ್ಯ ಅವರು ಗುಣಮುಖರಾಗಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ.








