ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಡಿ.9ರಿಂದ ಆರಂಭಗೊಳ್ಳಲಿದ್ದು, ಅಧಿವೇಶನ ಹಿನ್ನೆಲೆಯಲ್ಲಿ ವಕ್ಫ್ ವಿವಾದ, ಬಿಪಿಎಲ್ ಕಾರ್ಡ್ ರದ್ದು ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ದ ಮುಗಿಬೀಳಲು ಸಜ್ಜಾಗಿವೆ.
ವಕ್ಫ್ ಬೋರ್ಡ್ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ನಿರ್ಧಾರಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳು ಸದನದಲ್ಲಿ ಚರ್ಚೆಯ ಕೇಂದ್ರವಾಗುವ ಸಾಧ್ಯತೆಯಿದೆ. ಈ ಕುರಿತು ಸರ್ಕಾರದ ಕ್ರಮವನ್ನು ವಿರೋಧಿಸಲು ವಿರೋಧ ಪಕ್ಷಗಳು ಸಜ್ಜಾಗಿದ್ದು, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ತಯಾರಾಗಿವೆ.
BPL ಕಾರ್ಡ್ ರದ್ದು ಮಾಡಿರುವ ವಿಷಯವು ಬಹಳ ವಿವಾದಾತ್ಮಕವಾಗಿದ್ದು, ಅದರ ಪರಿಣಾಮವಾಗಿ ಸಾವಿರಾರು ಕುಟುಂಬಗಳು ಸಮಸ್ಯೆ ಅನುಭವಿಸುತ್ತಿವೆ ಎಂಬ ಆರೋಪವು ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಸರಕಾರದ ಸ್ಪಷ್ಟನೆ ಕೇಳಲು ಅವರು ಒತ್ತಾಯಿಸಬಹುದು.
ಈ ಚರ್ಚೆಗಳು ಸದನದಲ್ಲಿ ರಾಜಕೀಯ ಕೋಲಾಹಲ ಕ್ಕೆ ಕಾರಣವಾಗಬಹುದು ಆದರೂ ಎಲ್ಲವೂ ಆಡಳಿತ ಪಕ್ಷದ ನೀಡುವ ಉತ್ತರದ ಮೇಲೆ ನಿಂತಿದೆ.