ವಿಟ್ಲ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಷಷ್ಠ್ಯಬ್ದಿ ಆಚರಣೆ ಮಾಡಲಾಯಿತು.
ಈ ವೇಳೆ ಭಕ್ತಾಧಿಗಳ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತ್ಯಾಗಪೂರ್ಣ ಸೇವೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಸಾಧ್ಯ.
ಕಳೆದು ಹೋದುದರ ಬಗ್ಗೆ ಚಿಂತಿಸದೆ ಇರುವುದರಲ್ಲಿ ತೃಪ್ತಿಪಡುವ ಮನಸ್ಸು ನಮ್ಮದಾಗಬೇಕು ಎಂದರು.
ನಾವು ಯಾವುದೇ ಕಾರ್ಯಕ್ರಮ ಮಾಡಿದಾಗಿ ಅದು ಸಮಾಜಮುಖಿಯಾಗಿರಬೇಕು ಮಾತ್ರವಲ್ಲದೆ ಅದೊಂದು ನೆನಪಿನ ಬುತ್ತಿಯಾಗಿರಬೇಕು.
ಶಿಸ್ತುಬದ್ಧವಾಗಿ ನಡೆದ ಈ ಕಾರ್ಯಕ್ರಮದ ಯಶಸ್ವಿಯಾಗಿದೆ. ಈ ಷಷ್ಠ್ಯಬ್ದ ಕಾರ್ಯಕ್ರಮ ಹಲವಾರು ಸಮಾಜಮುಜಿ ಚಿಂತನೆಗಳಿಂದ ಕೂಡಿದೆ.
ನಾವು ಮಾಡಿದ ಕಾರ್ಯಕ್ರಮ ಆದರ್ಶಪೂರ್ಣ, ಅರ್ಥ ಸಮಾಜಮುಖಿ ಚಿಂತನೆಗಳನ್ನು ಒಳಗೊಂಡಿರಬೇಕಾಗಿದೆ. ಈ ಕಾರ್ಯಕ್ರಮದ ಯಶಿಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಇನ್ನು ವೇದಿಕೆಯಲ್ಲಿ ವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಚಂದ್ರಹಾಸ ರೈ, ಸಿಎ ರಾಮೋಹನ್ ರೈ, ಚಂದ್ರಶೇಖರ್ ಉಪಾಧ್ಯಾಯ, ಹಿರಣ್ಯ ವೆಂಕಟೇಶ್ವರ ಭಟ್, ಕಿರಣ್ ಯು, ಸರ್ವಾಣಿ ಪಿ ಶೆಟ್ಟಿ, ಅಶೋಕ್ ಬಿಜೈ, ಕೆ.ಪಿ ರಘುರಾಮ ಶೆಟ್ಟಿ, ರಘುನಾಥ ಶೆಟ್ಟಿ ಪಟ್ಲಗುತ್ತು, ಪಟ್ಲ ಮಹಾಬಲ ಶೆಟ್ಟಿ, ಶ್ರೀಧರ ಭಟ್ ಉಪಸ್ಥಿತರಿದ್ದರು.








