ಸದ್ಯ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಏಪ್ರಿಲ್ 8 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಭೆಯಲ್ಲಿ ಭಾಗಿಯಾಗಲು ಸಂಸದ ಅಸಾದುದ್ದೀನ್ ಓವೈಸಿಗೆ ಅವಕಾಶವಿಲ್ಲ. ಇದಕ್ಕೆ ಪ್ರಧಾನಿಯವರ ಪ್ರತಿಷ್ಠೆಯೇ ಕಾರಣ ಎಂದು ಓವೈಸಿ ದೂರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಹೈದರಾಬಾದ್ ಹಾಗೂ ಔರಂಗಾಬಾದ್ ಜನರ ಹಿರಿಮೆಗೆ ಮಾಡಿರುವ ಅನ್ಯಾಯ ಇದು ಎಂದು ಕರೆದಿದ್ದಾರೆ. ನನ್ನನ್ನು ಆಯ್ಕೆ ಮಾಡಿದ್ದರಿಂದ ಈ ಭಾಗದ ಜನರು ತಮ್ಮ ಮನುಷ್ಯತ್ವ ಕಳೆದುಕೊಂಡರೇ. ಈ ಜನರು ನಿಮ್ಮ ಗಮನವನ್ನು ಸೆಳೆಯಲು ಅರ್ಹರಾಗಿಲ್ಲ ಅನ್ನೋದು ಹೇಗೆ ಎಂದು ನನಗೆ ವಿವರಿಸಿ ಎಂದು ಆಗ್ರಹಿಸಿದ್ದಾರೆ. ಹೈದರಾಬಾದ್ ಹಾಗೂ ಔರಂಗಾಬಾದ್ ನ ಜನರು ನನ್ನ ಹಾಗೂ ಇಮ್ತಿಯಾಜ್ ಜಲೀಲ್ ರನ್ನು ಆಯ್ಕೆ ಮಾಡಿದ್ದಾರೆ. ಜನರ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ನಿಮ್ಮ ಮುಂದೆ ಇಡುವುದು ಸಂಸದನಾಗಿ ನನ್ನ ಕರ್ತವ್ಯವಾಗಿದೆ. ಆದರೆ ಪ್ರಧಾನಿಯವರ ಪ್ರತಿಷ್ಠೆಯಿಂದಾಗಿ ನಮಗೆ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತಿಲ್ಲ. ಹೈದರಾಬಾದ್ ನಲ್ಲಿ 93 ಆಕ್ಟೀವ್ ಕೇಸ್ ಗಳಿದ್ದು, ಕೊರೊನಾ ಬಗ್ಗೆ ನಮಗಿರುವ ಯೋಚನೆಗಳನ್ನು ಹಾಗೂ ಈ ವಿಷಯದಲ್ಲಿ ಆಗಿರುವ ಕುಂದುಕೊರತೆಗಳನ್ನು ಪ್ರಧಾನಿಯವರ ಮುಂದಿಡಲು ಬಯಸಿದ್ದೇನೆ ಎಂದು ಗುಡುಗಿದ್ದಾರೆ.








