ಇನ್ನೇನು 2021 ಕ್ಕೆ ಗುಡ್ ಬೈ ಹೇಳೋ ಸಮಯ ಹತ್ರ ಬಂದೇ ಬಿಡ್ತು.. ನಾವೆಲ್ರೂ 2021ರ ಕೊನೆಯ ತಿಂಗಳಿನಲ್ಲಿದ್ದು 2022 ಅನ್ನ ಹೊಸ ಉತ್ಸಾಹದಿಂದ , ಹೊ ಆಸೆ , ಕನಸುಗಳ ಜೊತೆ ಬರಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ.. ಆದ್ರೆ ಸಿನಿಮಾರಂಗದ ಪಾಲಿಗೆ ಈ ವರ್ಷ ಪರವಾಗಿಲ್ಲ ಅನ್ನೋ ರೀತಿ ಇತ್ತು ಹೊರತು.. ಸೂಪರ್ ಅನ್ನೋ ಅಷ್ಟು ಅಮೇಜಿಂಗ್ ಆಗಿ ಇರಲಿಲ್ಲ.. ಕಾರಣ ಕೊರೋನಾ.. 2 ವರ್ಷಗಳಿಂದ ಸಿನಿಮಾರಂಗ ಚೈತನ್ಯ ಕಳೆದುಕೊಂಡಿತ್ತು..
2 ಅಲೆಗಳ ನಡುವೆ ಸಿನಿಮಾರಂಗಕ್ಕೆ ದೊಡ್ಡ ಪೆಟ್ಟೇ ಬಿದ್ದಿತ್ತು.. ಆದ್ರೂ ಕೆಲ ತಿಂಗಳಿಂದ ಮತ್ತೆ ಕೊಂಚ ಮಟ್ಟಿಗೆ ಚೇತರಿಸಿಕೊಂಡು ಸ್ಟಾರ್ ಗಳ ಸಿನಿಮಾಗಳು ಭಾರತದಲ್ಲಿ ರಿಲೀಸ್ ಆಗಿ ಅಬ್ಬರಿವೆ.. ಮದಗಜ ಇರಬಹುದು ,ಅಖಂಡ ಇರಬಹುದು , ಕೋಟಿಗೊಬ್ಬ 3 , ಸಲಗ, ಹಿಂದಿಯ ಸೂರ್ಯವಂಶಿ ಇರಬಹುದು.. ಅಣ್ಣಾತೆ ಇರಬಹುದು.. ಪ್ರಸ್ತುತ ಆಲ್ ಓವರ್ ಇಂಡಿಯಾದಲ್ಲಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿರುವ ಅಲ್ಲು ನಟನೆಯ ಪುಷ್ಪ ಇರಬಹುದು..
ಥಿಯೇಟರ್ ಗಳು ಮಾತ್ರವಲ್ಲ ಒಟಿಟಿಯಲ್ಲೂ ಕೂಡ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗಿ ಭಾರೀ ಮಟ್ಟದ ಸಕ್ಸಸ್ ಕಂಡಿವೆ..
ಅಂತಹದ್ದೇ ಭಾರತದ 5 ಸಿನಿಮಾಗಳು ಒಟಿಟಿಯಲ್ಲಿ 2021ರಲ್ಲಿ ರಿಲೀಸ್ ಆಗಿ ಸೂಪರ್ ಸಕ್ಸಸ್ ಕಂಡಿರುವ ಬಗ್ಗೆ ನೋಡಿದ್ರೆ…..
ಜೈ ಭೀಮ್
ಸೂರ್ಯ ಅಭಿನಯದ ತಮಿಳಿನ ಈ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಿತ್ತು.. ಸಾಕಷ್ಟು ವಿವಾದ ವಿರೋಧಗಳ ನಡುವೆಯೂ ಸೂಪರ್ ಹಿಟ್ ಆಗಿ ಪ್ರೇಕ್ಷರನ್ನ ಅದ್ರಲ್ಲೂ ಯುವ ಜನರನ್ನ ಪ್ರೇರೇಪಿಸುವಲ್ಲಿ ಯಸಸ್ವಿಯಾಯ್ತು.. ಸತ್ಯ ಘಟನೆಯ ಆಧಾರಿತ ಸಿನಿಮಾಗೆ IMDB 9.5 ರೇಟಿಂಗ್ ಕೂಡ ನೀಡಿತ್ತು.. ಈ ಮೂಲಕ ಸಿನಿಮಾ ಹಾಲಿವುಡ್ ಸಿನಿಮಾಗಳನ್ನ ಮೀರಿ ಯಶಸ್ಸು ಸಾಧಿಸಿತ್ತು..
ದೃಶ್ಯಂ 2
ಮೋಹನ್ ಲಾಲ್ ಅಭಿನಯದ ದೃಶ್ಯ 2 , ದೃಶ್ಯ 1 ಸಿನಿಮಾದ ಸೀಕ್ವೆಲ್.. ಸಸ್ಪೆನ್ಸ್ , ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾವಾಗಿದೆ.. ಈ ಸಿನಿಮಾವನ್ನ ಕನ್ನಡದಲ್ಲಿ , ತೆಲುಗಿನಲ್ಲಿ ರೀಮೇಪಕ್ ಮಾಡಲಾಗಿದ್ದು, ರವಿದಚಂದ್ರನ್ ನಟನೆಯ ದೃಶ್ಯ 2 ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡ್ರೆ , ತೆಲುಗಿನಲ್ಲಿ ವೆಂಕಟೇಶ್ ನಟಿಸಿದ್ದ ಸಿನಿಮಾ ಒಟಿಟಿಯಲ್ಲಿ ಸಕ್ಸಸ್ ಕಂಡಿದೆ..
ಕಾಲ
ರೋಹಿತ್ ವಿ.ಎಸ್ ಅವರ ಮಲಯಾಳಮ್ ಸಿನಿಮಾ… ಸೈಕಲಾಜಿಕಲ್ ಆಕ್ಷನ್ ಡ್ರಾಮಾ ಚಿತ್ರವಿದು.. ಈ ಸಿನಿಮಾ ಈ ಬಾರಿ ಒಟಿಟಿ ಪ್ರೇಕ್ಷಕರ ನ್ ಆಫ್ ದ ಫೇವರೇಟ್ ಸಿನಿಮಾ ಆಗಿರೋದಕ್ಕೆ ಕಾರಣ , ಸ್ಟೋರಿ ಲೈನ್, ವಿಶ್ಯುಯಾಲಿಟಿ , ಸಿನಿಮಾದ ಕ್ವಾಲಿಟಿ..
ಶೇರ್ನಿ
ವಿದ್ಯಾಬಾಲನ್ ಅಭಿನಯದ ಬಾಲಿವುಡ್ ಸಿನಿಮಾ ಶೇರ್ನಿ ಕೂಡ ಒಟಿಟಿಯಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ..
ಸರ್ದಾರ್ ಉಧಮ್
ವಿಕ್ಕಿ ಕೌಶಾಲ್ ಅಭಿನಯದ ಉಧಮ್ ಸಿಂಗ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಕೇಂದ್ರೀಕೃತವಾಗಿರುವ ಸಿನಿಮಾವಾಗಿದೆ.. ಶೂಜಿತ್ ಸಿರ್ಕಾರ್ ಅವರ ನಿರ್ದೇಶನದ ಸಿನಿಮಾ ಒಟಿಟಿಯಲ್ಲಿ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು.
ರತ್ನನ್ ಪ್ರಪಂಚ
ಇನ್ನೂ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾ ಕೂಡ ಅಪಾರ ಪ್ರೀತಿಯನ್ನ ಗಳಿಸುವಲ್ಲಿ ಯಶಸ್ವಿಯಾಗಿದೆ..








