ನಮ್ಮ ಲಕ್ಷ್ಮೀ ಮೇಡಂ ಸ್ಟ್ರಾಂಗ್ : ಅಣ್ಣನಿಗೆ ಸತೀಶ್ ಜಾರಕಿಹೊಳಿ ಟಾಂಗ್
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕತ್ ಪ್ರಬಲವಾಗಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಮೇಶ್ ಜಾರಕಿಹೊಳಿ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಕ್ಷೇತ್ರ ಗಟ್ಟಿ ಇದೆ. ಭದ್ರ ಇದೆ.
ಮೇಲಾಗಿ ನಮ್ಮ ಹಿಡಿತದಲ್ಲಿದೆ ಅಂತಾ ಈಗಾಗಲೇ ರಮೇಶ್ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮಿ ಮೇಡಂ ಉತ್ತರ ಕೊಟ್ಟಿದ್ದಾರೆ. ಅದು ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಲೆಕ್ಕ, ಜಿಲ್ಲೆ ಮಟ್ಟದ್ದಾದರೇ ನಾವು ಹೇಳ್ತೀವಿ ಎಂದು ಹೇಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಪ್ರಬಲವಾಗಿದ್ದಾರೆ. ಅವರ ನೇತೃತ್ವದಲ್ಲಿ ಹೆಚ್ಚು ಗ್ರಾಮ ಪಂಚಾಯತ್ಗಳಲ್ಲಿ ಗೆದ್ದಿದೀವಿ, ಅವರ ಹಿಡಿತದಲ್ಲಿ ಕ್ಷೇತ್ರ ಇದೆ ಎಂಬುವುದನ್ನು ಇದು ತೋರಿಸುತ್ತದೆ ಎಂದರು.
ಭೂಗತ ಪಾತಕಿ ಛೋಟಾ ರಾಜನ್ ಗೆ 2 ವರ್ಷ ಜೈಲು ಶಿಕ್ಷೆ
ಬಿಜೆಪಿ ಲಸಿಕೆ ನಾನು ತಗೋಲಲ್ಲ ಎಂದ ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಲಸಿಕೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಲಸಿಕೆಯಲ್ಲಿ ಬಿಜೆಪಿ ಲಸಿಕೆ, ಕಾಂಗ್ರೆಸ್ ಲಸಿಕೆ ಅಂತ ಬರಲ್ಲ. ಜನರಿಗೆ ಒಳ್ಳೆದಾದ್ರೆ ಅಷ್ಟೆ ಸಾಕು ಎಂದರು.
ಗೋಕಾಕ್ ಜಿಲ್ಲೆ ರಚನೆ ಬಗ್ಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ತುಂಬಾ ದೊಡ್ಡದಿದೆ. ಹೀಗಾಗಿ ಅಭಿವೃದ್ಧಿ ಮಾಡೋಕೆ ಆಗಲ್ಲ. ಜಿಲ್ಲೆ ವಿಭಜನೆ ಆಗಲೇಬೇಕು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









