ಬೆಂಗಳೂರು: ವಕ್ಫ್ ಕಾನೂನು ರದ್ದಾಗುವವರೆಗೂ ನಾವು ಹೋರಾಟ ನಡೆಸಲಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ಹೋರಾಟ ವಕ್ಫ್ ವಿರುದ್ಧ ನಿರಂತರವಾಗಿ ಮುಂದುವರೆಯಲಿದೆ. ಮುಂದಿನ ಹೋರಾಟದ ಬಗ್ಗೆ ಈಗಾಗಲೇ ಚಿಂತನೆ ನಡೆದಿದೆ. ನಾವು ನಮ್ಮ ಹೋರಾಟಕ್ಕೆ ಎಲ್ಲ ನಾಯಕರಿಗೆ ಆಹ್ವಾನ ನೀಡುತ್ತೇವೆ. ನಮ್ಮದು ಜನಪರ ಆಂದೋಲನ. ವಕ್ಫ್ ಆಸ್ತಿ ಎಂದು 3 ಪಾಕಿಸ್ತಾನ ಮಾಡುವಷ್ಟು ಜಾಗ ನೀಡುತ್ತಿದ್ದಾರೆ. ನಮ್ಮ ಹೋರಾಟದಿಂದಲೇ ವಕ್ಫ್ ಆಂದೋಲನ ಇಡೀ ದೇಶದಲ್ಲಿ ಅಗ್ತಿದೆ. ವಕ್ಫ್ ಕಾನೂನು ರದ್ದು ಮಾಡಬೇಕು ಎಂಬ ಉದ್ದೇಶದಿಂದ ನಾವು ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.
ನಾವು ಹೋರಾಟ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಭೇಟಿ ಮಾಡಿ, ಕಾನೂನು ರದ್ದು ಮಾಡುವಂತೆ ಮೋದಿ ಅವರಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.








