ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1.59 ಲಕ್ಷ ಹೊಸ ಪ್ರಕರಣಗಳು, 327 ಸಾವು
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,59,632 ಕೊರೊನಾ ಪ್ರಕರಣಗಳು ದಾಖಲಾಗಿವೆ, 327 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 40,863 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರ ಅಂಕಿಅಂಶಗಳನ್ನು ನೀಡಿದೆ.
ಅಲ್ಲದೇ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 5,90,611ಕ್ಕೆ ಏರಿಕೆಯಾಗಿದ್ದು, 3,44,53,603 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 4,83,790 ಜನ ಸಾವನ್ನಪ್ಪಿದ್ದಾರೆ. ಒಟ್ಟು ಚೇತರಿಕೆ ದರವು ಸುಮಾರು 97.30 ಪ್ರತಿಶತದಷ್ಟಿದೆ. ಎಂದು ಸಚಿವಾಲಯದ ಅಂಕಿಅಂಶಗಳನ್ನು ನೀಡಿದೆ.